alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆ ಯಶಸ್ಸು ಗಳಿಸೋದು ಹೇಗೆ? ಗೂಗಲ್ ಮಾಜಿ ಸಿಬ್ಬಂದಿ ನೀಡಿದ್ದಾರೆ ಟಿಪ್ಸ್

ಗೂಗಲ್ ನ ಮಾಜಿ ಉದ್ಯೋಗಿಯೊಬ್ಬರು ಮಹಿಳೆಯರಿಗೆ ಮಾರ್ಗದರ್ಶಿ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ವ್ಯಂಗ್ಯ ಶೈಲಿಯಲ್ಲಿ ವಿಷ್ಯವನ್ನು ಪ್ರಸ್ತುತಪಡಿಸಲಾಗಿದೆ. ಗೂಗಲ್ ನ ಮಾಜಿ ಉದ್ಯೋಗಿ, ಯೂಸರ್ ಎಕ್ಸ್ಪೆರಿಯನ್ಸ್ ಡಿಸೈನರ್ ಆಗಿದ್ದ ಕಾಮಿಡಿಯನ್ ಸಾರಾ ಕಪೂರ್ ಪುಸ್ತಕ ಬರೆದಿದ್ದಾರೆ. ಪುಸ್ತಕದ ಹೆಸರು` how to be successful without hurting mens feelings’.

ಪುರುಷರಿಗೆ ಹರ್ಟ್ ಮಾಡದೆ ಹೇಗೆ ಯಶಸ್ಸು ಗಳಿಸಬೇಕು ಮಹಿಳೆಯರು ಎಂಬುದನ್ನು ಇದ್ರಲ್ಲಿ ಹೇಳಲಾಗಿದೆ. ಗೂಗಲ್ ನಲ್ಲಿ ಕೆಲಸ ಮಾಡುವ ವೇಳೆ ಆದ ಅನುಭವ ಸಾರಾಗೆ ಪುಸ್ತಕ ಬರೆಯಲು ಪ್ರೇರಣೆಯಾಯ್ತಂತೆ. ಪುಸ್ತಕದಲ್ಲಿ ಮಹಿಳಾ ಸಿಬ್ಬಂದಿ ಏನು ಮಾಡಬೇಕು ಹಾಗೆ ಏನು ಮಾಡಬಾರದು ಎಂಬುದನ್ನು ವಿವರಿಸಲಾಗಿದೆ.

ಮಹತ್ವಾಕಾಂಕ್ಷಿ ಮಹಿಳೆಯರು ಹೆದರಿಕೆಯುಳ್ಳವರಾಗಿರುತ್ತಾರೆ. ವೇಗವಾಗಿ ಬೆಳೆಯುತ್ತಿರುವ ವ್ಯವಹಾರ ಜಗತ್ತಿನಲ್ಲಿ ನಾಯಕತ್ವ ವಹಿಸಿರುವ ಮಹಿಳೆ ಆಕ್ರಮಣಕಾರಿ ಹಾಗೂ ಸಾಮರ್ಥ್ಯವನ್ನು ತೋರ್ಪಡಿಸುವವಳಾಗಿರಬಾರದು ಎಂದು ಹೇಳಲಾಗಿದೆ.

ಮಹಿಳಾ ಉದ್ಯೋಗಿಗಳ ಕಲ್ಪನೆಗಳನ್ನು ಕದ್ದಾಗ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂದು ಸಾರಾ ಹೇಳಿದ್ದಾರೆ. ಬ್ಲಾಗ್ ನಲ್ಲಿ ಕೂಡ ಸಾರಾ ಈ ಬಗ್ಗೆ ಬರೆಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...