alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರನ್ನು ಸಂಪರ್ಕಿಸಲು ಇಲ್ಲಿದೆ ಐದು ಸುಲಭ ಮಾರ್ಗ

ಜನಸಾಮಾನ್ಯರಿಗೆ ಪ್ರಧಾನ ಮಂತ್ರಿ ಸಂಪರ್ಕಿಸೋದು ಕಷ್ಟ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗ್ತಿದ್ದಂತೆ ಈ ಕಷ್ಟದ ಕೆಲಸವನ್ನು ಸುಲಭ ಮಾಡಿದ್ದಾರೆ. ತಮ್ಮ ಕಷ್ಟ ಹಾಗೂ ಸಲಹೆಗಳನ್ನು ನೇರವಾಗಿ ಮೋದಿ ಬಳಿ ಹೇಳಿಕೊಳ್ಳಲು ಅನೇಕರು ಬಯಸ್ತಾರೆ. ಆದ್ರೆ ಮೋದಿಯವರನ್ನು ಹೇಗೆ ಸಂಪರ್ಕಿಸೋದು ಎಂಬುದು ಬಹುತೇಕರಿಗೆ ತಿಳಿದಿಲ್ಲ.

ನರೇಂದ್ರ ಮೋದಿಯವರನ್ನು ಸುಲಭವಾಗಿ ತಲುಪುವ ಮಾರ್ಗ ಸಾಮಾಜಿಕ ಜಾಲತಾಣ. ಮೋದಿಯವರ ಅಧಿಕೃತ ವೆಬ್ಸೈಟ್ ಮೂಲಕ ನಿಮ್ಮ ಮಾತನ್ನು ಅವರಿಗೆ ತಲುಪಿಸಬಹುದಾಗಿದೆ. ನೀವು www.facebook.com/narendramodi, twitter.com/narendramodi, https://plus.google.com/+NarendraModi, https://www.youtube.com/user/narendramodi  ಮೂಲಕ ಮೋದಿಯವರನ್ನು ಸಂಪರ್ಕಿಸಬಹುದಾಗಿದೆ.

ಸಾಮಾಜಿಕ ಜಾಲತಾಣವೊಂದೇ ಅಲ್ಲ ಇ-ಆಡಳಿತದ ಮೂಲಕವೂ ನೀವು ಮೋದಿಯವರನ್ನು ಸಂಪರ್ಕಿಸಬಹುದಾಗಿದೆ. https://pgportal.gov.in/pmocitizen/Grievancepmo.aspx ನಲ್ಲಿ ನಿಮ್ಮ ದೂರು, ಸಲಹೆ, ಶುಭಾಶಯಗಳನ್ನು ಹೇಳಬಹುದಾಗಿದೆ. ನರೇಂದ್ರ ಮೋದಿ ಆ್ಯಪ್ ಮೂಲಕವೂ ಮೋದಿಯವರನ್ನು ಸಂಪರ್ಕಿಸಬಹುದಾಗಿದೆ.

ಮೋದಿ ಸಂಪರ್ಕಿಸಲು ಇಮೇಲ್ ಕೂಡ ನಿಮಗೆ ನೆರವಾಗಲಿದೆ. [email protected], [email protected] ಗೆ ನೀವು ಮೇಲ್ ಮಾಡಬಹುದು. ಈ ಎಲ್ಲ ಮಾಧ್ಯಮಗಳ ಮೂಲಕ ನಿಮಗೆ ಸಂಪರ್ಕ ಸಾಧ್ಯವಿಲ್ಲವೆಂದಾದ್ರೆ ವೆಬ್ ಇನ್ಫಾರ್ಮೇಶನ್ ಮ್ಯಾನೇಜರ್, ಸೌತ್ ಬ್ಲಾಕ್, ರೈಸಿನಾ ಹಿಲ್ಸ್, ನವದೆಹಲಿ, ಪಿನ್ 110011 ಗೆ ಪತ್ರ ಬರೆಯಿರಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...