alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ನಲ್ಲಿ ವೋಟರ್ ಐಡಿಗೆ ಅಪ್ಲೈ ಮಾಡೋದೇಗೆ…?

ಎಲೆಕ್ಷನ್ ಹತ್ತಿರ ಬರ್ತಿದೆ. ಸೂಕ್ತ ಅಭ್ಯರ್ಥಿಗೆ ಮತ ನೀಡೋದು ನಮ್ಮ ಕರ್ತವ್ಯ. ಆದ್ರೆ ಅನೇಕರ ಬಳಿ ವೋಟರ್ ಕಾರ್ಡ್ ಇರೋದೇ ಇಲ್ಲ. ಅದಕ್ಕಾಗಿ ಅಲೆದಾಡೋಕೆ ಎಲ್ಲಿದೆ ಸಮಯ ಅಂತಾ ಅನೇಕರು ವೋಟರ್ ಐಡಿ ಮಾಡಿಸಿಕೊಳ್ಳೋದೇ ಇಲ್ಲ. ಆದ್ರೆ ಕುಳಿತಲ್ಲಿಂದಲೇ ಇದಕ್ಕೆ ಅರ್ಜಿ ಸಲ್ಲಿಸಬಹುದು ಅನ್ನೋದು ಅನೇಕರಿಗೆ ಗೊತ್ತಿಲ್ಲ. ಇದಕ್ಕಾಗಿ ನೀವು ಮಾಡಬೇಕಾಗಿರೋದು ಇಷ್ಟೇ.

ನ್ಯಾಷನಲ್ ವೋಟರ್ ಸರ್ವೀಸ್ ಪೋರ್ಟಲ್ ಗೆ (National Voter Services Portal)ಭೇಟಿ ನೀಡಿ ಅಲ್ಲಿ ಹೊಸ ವೋಟರ್ ಐಡಿ ರಿಜಿಸ್ಟ್ರೇಷನ್ ಗೆ ಅಪ್ಲೈ ಮಾಡಿ. ಅಥವಾ ನೀವು ನೇರವಾಗಿ NVSP Form 6 Page ಗೆ ಭೇಟಿ ನೀಡಬಹುದು.

ಅಲ್ಲಿ ತೆರೆದುಕೊಳ್ಳುವ ಫಾರ್ಮ್ ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ.

ನೀವು ನಿಮ್ಮ ಜನ್ಮದಾಖಲೆ ಹಾಗೂ ರೆಸಿಡೆನ್ಶಿಯಲ್ ಪ್ರೂಫ್ ನ ಸ್ಕ್ಯಾನ್ ಮಾಡಿದ ಕಾಪಿ ಲಗತ್ತಿಸಬೇಕಾಗುತ್ತದೆ.

ತುಂಬಿದ ಮಾಹಿತಿಗಳನ್ನು ಎರಡೆರಡು ಬಾರಿ ಪರೀಕ್ಷಿಸಿಕೊಳ್ಳಿ. ನಂತರ ಪೇಜ್ ನ ಕೊನೆಯಲ್ಲಿರುವ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

ಆನಂತರ  ನಿಮ್ಮ ಇಮೇಲ್ ಗೆ ಒಂದು ಲಿಂಕ್ ಬರುತ್ತೆ. ಇದರಿಂದ ನೀವು ನಿಮ್ಮ ವೋಟರ್ ಐಡಿ ಯಾವ ಹಂತದಲ್ಲಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಐಡಿ ನಿಮ್ಮ ಕೈಸೇರಲು ಸುಮಾರು 30 ದಿನಗಳು ಬೇಕಾಗಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...