alex Certify
ಕನ್ನಡ ದುನಿಯಾ       Mobile App
       

Kannada Duniya

ಪೈಲಟ್ ಅಂತಾ ಪೋಸು ಕೊಟ್ಟವ ಮಾಡ್ತಿದ್ದಿದ್ದು ಇಂಥಾ ಕೆಲಸ

ಆನ್ ಲೈನ್ ನಲ್ಲಿ ಯಾವುದೇ ವಸ್ತುಗಳನ್ನು ಮಾರಾಟ ಮಾಡುವ ಮುನ್ನ ಬ್ಯಾಂಕ್ ನಿಂದ ನಿಮಗೆ ಬಂದಿರೋ ಮೆಸೇಜ್ ಅನ್ನು ಸರಿಯಾಗಿ ಚೆಕ್ ಮಾಡಿ. ಯಾಕಂದ್ರೆ ಅದು ನಕಲಿಯಾಗಿರಲೂಬಹುದು. ಇದೇ ರೀತಿ ಫೇಕ್ ಮೆಸೇಜ್ ಮಾಡಿ ಆನ್ ಲೈನ್ ನಲ್ಲಿ ಮೋಸ ಮಾಡ್ತಿದ್ದ 24 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರಿಶಿ ಕಪೂರ್ ತಾನೊಬ್ಬ ಪೈಲಟ್ ಅಂತಾ ಆನ್ ಲೈನ್ ನಲ್ಲಿ ಪೋಸ್ ಕೊಟ್ಟಿದ್ದ. ವಿಮಾನ ನಿಲ್ದಾಣದಲ್ಲಿರೋ ಡ್ಯೂಟಿ-ಫ್ರೀ ಶಾಪ್ ಗಳಿಂದ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ತಂದು ಕೊಡುವುದಾಗಿ ಜಾಹೀರಾತು ನೀಡಿದ್ದ. ಅಷ್ಟೇ ಅಲ್ಲ ವಿವಿಧ ಏರ್ ಲೈನ್ಸ್ ನಲ್ಲಿ ಉದ್ಯೋಗ ಕೊಡಿಸುವುದಾಗಿಯೂ ಆಮಿಷ ಒಡ್ಡಿದ್ದ.

ರಿಶಿ ಕಪೂರ್ ಗೆ ಮಹಿಳೆಯೊಬ್ಳು ಸಾಥ್ ಕೊಟ್ಟಿದ್ಲು. ಜಾಹೀರಾತು ನೋಡಿ ಮಹಿಳೆಯೊಬ್ಳು ತನ್ನ ಲ್ಯಾಪ್ಟಾಪ್ ಅನ್ನು ಆನ್ ಲೈನ್ ನಲ್ಲಿ ಮಾರಾಟ ಮಾಡಿದ್ಲು. ಹಣ ಆಕೆಯ ಖಾತೆಗೆ ವರ್ಗಾವಣೆ ಆಗಿರೋ ಮೆಸೇಜ್ ಕೂಡ ಬಂದಿತ್ತು. ಆದ್ರೆ ಆ ಮೆಸೇಜ್ ನಕಲಿಯಾಗಿತ್ತು. ಕೂಡಲೇ ಆಕೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು.

10 ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಇಟ್ಕೊಂಡು ರಿಶಿ ಈ ದಂಧೆ ನಡೆಸುತ್ತಿದ್ದ. ಈತನ ವಿರುದ್ಧ 4 ವಂಚನೆ ಪ್ರಕರಣಗಳು ದಾಖಲಾಗಿವೆ. ರಿಶಿ ನೌಕಾಸೇನೆ ಅಥವಾ ವಾಯುಸೇನೆಯಲ್ಲಿ ಕೆಲಸ ಮಾಡಬೇಕು ಅನ್ನೋದು ಹೆತ್ತವರ ಆಸೆಯಾಗಿತ್ತು. ಆದ್ರೆ ಎರಡೂ ಕಡೆಗಳಲ್ಲಿ ತರಬೇತಿಗೆ ಸೇರಿದ್ದ ರಿಶಿ ಅದನ್ನು ಅರ್ಧಕ್ಕೆ ಬಿಟ್ಟು ಬಂದಿದ್ದ.

ನಂತರ ಈ ದಂಧೆ ಶುರು ಮಾಡಿದ್ದ. ಪೈಲಟ್ ಕೆಲಸ ಕೊಡಿಸೋದಾಗಿ ಹೇಳಿ ಒಬ್ಬೊಬ್ಬರಿಂದ 7 ಲಕ್ಷ, ಇತರ ಉದ್ಯೋಗದ ಆಮಿಷವೊಡ್ಡಿ ತಲಾ 1.5 ಲಕ್ಷ ರೂಪಾಯಿ ಪೀಕುತ್ತಿದ್ದ. ಕೋಲ್ಕತ್ತಾದ ಫೈವ್ ಸ್ಟಾರ್ ಹೋಟೆಲ್ ನಲ್ಲಿ 72 ದಿನಗಳ ಕಾಲ ತಂಗಿದ್ದ ರಿಶಿ ಇತ್ತೀಚೆಗಷ್ಟೆ ದೆಹಲಿಗೆ ಬಂದಿದ್ದ, ಕೊನೆಗೂ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...