alex Certify
ಕನ್ನಡ ದುನಿಯಾ       Mobile App
       

Kannada Duniya

ವಿಪಕ್ಷ ನಾಯಕರೊಂದಿಗೆ ಹಾಡಿದ ಮೇಘಾಲಯ ಸಿಎಂ

megh

ಸ್ನೇಹದಲ್ಲಿ ರಾಜಕೀಯ ಬೆರೆಸಬಾರದು ಅನ್ನೋ ಸಂದೇಶವನ್ನು ಮೇಘಾಲಯ ಸಿಎಂ ಮುಕುಲ್ ಸಂಗ್ಮಾ ವಿಭಿನ್ನವಾಗಿ ಸಾರಿದ್ದಾರೆ. ಗೆಳೆತನ ರಾಜಕೀಯವನ್ನೂ ಮೀರಿದ್ದು ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.

ವಿಪಕ್ಷ ನಾಯಕರ ಜೊತೆಗೆ ಹಾಡು ಹಾಡುವ ಮೂಲಕ ಮಾದರಿಯಾಗಿದ್ದಾರೆ. ಮೇಘಾಲಯದ ಪ್ರತಿಪಕ್ಷ ನಾಯಕರಾದ ಡಾ.ಡೊಂಕುಪರ್ ರಾಯ್ ಮತ್ತು ಯುಡಿಪಿ ಮುಖ್ಯಸ್ಥ ಪೌಲ್ ಲಿಂಗ್ಡೋ ಜೊತೆ ಮುಕುಲ್ ಸಂಗ್ಮಾ ಹಾಡು ಹೇಳಿದ್ರು.

ಮೂವರೂ ಜೊತೆಯಾಗಿ ಬೀಟಲ್ಸ್ ತಂಡದ ಜನಪ್ರಿಯ ಹಾಡು ‘ ಆಲ್ ಮೈ ಲವಿಂಗ್’ ಗೆ ಧ್ವನಿಯಾಗಿದ್ದಾರೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ರಾಜಕೀಯ ಅಂದ್ರೆ ಹಾವು- ಏಣಿ ಆಟ ಅಂತಾರೆ, ಅಲ್ಲಿ ಸಂಬಂಧಗಳಿಗೆ ಬೆಲೆಯಿಲ್ಲ. ತಂದೆ ಮತ್ತು ಮಗ ಅಧಿಕಾರಕ್ಕಾಗಿ ಕಿತ್ತಾಡ್ತಾ ಇರೋದಕ್ಕೆ ಉತ್ತರ ಪ್ರದೇಶವೇ ಸಾಕ್ಷಿ. ಅಂಥದ್ರಲ್ಲಿ ವಿಪಕ್ಷಗಳ ಜೊತೆ ಉತ್ತಮ ಬಾಂಧವ್ಯ ದೂರದ ಮಾತು. ಆದ್ರೆ ಮೇಘಾಲಯ ಸಿಎಂ ಮುಕುಲ್ ಸಂಗ್ಮಾ ಮಾತ್ರ ಪ್ರತಿಪಕ್ಷದವರನ್ನೂ ಸ್ನೇಹದಿಂದ ಕಾಣುವ ಮೂಲಕ ಸಂಚಲನ ಮೂಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...