alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗಿದೆ ಪ್ರಧಾನಿ ಮೋದಿಯವರ ಹುಟ್ಟುಹಬ್ಬ ಆಚರಣೆ

ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಹುಟ್ಟುಹಬ್ಬದ ಸಂಭ್ರಮ. ಮೋದಿ ಸೆಪ್ಟೆಂಬರ್ 17 ರ ಭಾನುವಾರದಂದು 67ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್ ಡೇಯಂದು ಮೋದಿ ಇಡೀ ದಿನ ಮಾಡುವ ಕೆಲಸ  ಮೊದಲೇ ನಿಗದಿಯಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದಂದು ಬೆಳಿಗ್ಗೆ ಗುಜರಾತಿನ ಗಾಂಧಿನಗರದಲ್ಲಿರುವ ತಮ್ಮ ಮನೆಗೆ ಹೋಗಿ ತಾಯಿಯವರ ಆಶೀರ್ವಾದ ಪಡೆಯಲಿದ್ದಾರೆ. ಹಿಂದಿನ ಬಾರಿ ಕೂಡ ಮೋದಿ ಮೊದಲು ತಾಯಿಯ ಆಶೀರ್ವಾದ ಪಡೆದಿದ್ದರು. ದಿನದ ಬಹುತೇಕ ಸಮಯವನ್ನು ಅವರು ಗುಜರಾತಿನಲ್ಲಿ ಕಳೆಯಲಿದ್ದಾರೆ.

ಹುಟ್ಟುಹಬ್ಬದ ಸಂದರ್ಭದಲ್ಲಿ ಮೋದಿ ಸರ್ದಾರ್ ಸರೋವರ್ ಆಣೆಕಟ್ಟನ್ನು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಎರಡನೇ ಅತ್ಯಂದ ದೊಡ್ಡ ಆಣೆಕಟ್ಟಾಗಿದೆ. ಇದೇ ವೇಳೆ ನರ್ಮದಾ ನದಿಗೆ ಪೂಜೆ ಅರ್ಚನೆ ಸಲ್ಲಿಸಲಿದ್ದಾರೆ. ಉದ್ಘಾಟನೆ ನಂತ್ರ ನಿರ್ಮಾಣ ಹಂತದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಉಕ್ಕಿನ ಪ್ರತಿಮೆ ವೀಕ್ಷಣೆ ಮಾಡಲಿದ್ದಾರೆ.

ನಂತ್ರ ವಡೋದರಾದ ಡಬೊಯಿಯ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ವರ್ಷ ಗುಜರಾತ್ ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮೋದಿ ಭಾಷಣ ಮತ್ತಷ್ಟು ಮಹತ್ವ ಪಡೆದಿದೆ. ಈ ಎಲ್ಲ ಕಾರ್ಯಕ್ರಮ ಮುಗಿಸಿ ಅಮ್ರೆಲಿಗೆ ಭೇಟಿ ನೀಡಲಿರುವ ಮೋದಿ ಎಪಿಎಂಸಿ ಹೊಸ ಮಾರುಕಟ್ಟೆ ಯಾರ್ಡ್ ಉದ್ಘಾಟಿಸಲಿದ್ದಾರೆ. ಜೇನು ಉತ್ಪಾದನಾ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನ್ಮದಿನವನ್ನು ಕೇಂದ್ರ ಸರ್ಕಾರ ಸೇವಾ ದಿವಸ್ ಹೆಸರಿನಲ್ಲಿ ಆಚರಣೆ ಮಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...