alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಯಡವಟ್ಟು ಮಾಡಿಕೊಂಡ ನಟ ಪರೇಶ್ ರಾವಲ್

ರಾಜಕೀಯ ಪಕ್ಷಗಳು ಈಗ ಸಾಮಾಜಿಕ ಜಾಲತಾಣಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ತಿವೆ. ಆದ್ರೆ ಬಿಜೆಪಿ ಸಂಸದ ಹಾಗೂ ನಟ ಪರೇಶ್ ರಾವಲ್ ಯಡವಟ್ಟು ಮಾಡ್ಕೊಂಡಿದ್ದಾರೆ. ಬಿಜೆಪಿ ಬೆಂಬಲಿಗರೆಲ್ಲ ಹ್ಯಾಶ್ ಟ್ಯಾಗ್ ಝೂಟಿ ಕಾಂಗ್ರೆಸ್ ಎಂಬ ಟ್ರೆಂಡ್ ಸೃಷ್ಟಿಸುವಂತೆ ಸೂಚಿಸಲಾಗಿತ್ತು.

ಇದಕ್ಕೆ ಸಂಬಂಧಪಟ್ಟ ಗೂಗಲ್ ಡಾಕ್ಯುಮೆಂಟ್ ಒಂದನ್ನು ಪರೇಶ್ ರಾವಲ್ ಆಕಸ್ಮಿಕವಾಗಿ ಟ್ವೀಟ್ ಮಾಡಿಬಿಟ್ಟಿದ್ದಾರೆ. ಈ ಮೂಲಕ ಬಿಜೆಪಿ ತಂತ್ರಗಾರಿಕೆಯನ್ನೇ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ತಪ್ಪಿನ ಅರಿವಾಗುತ್ತಿದ್ದಂತೆ ಪರೇಶ್ ರಾವಲ್ ಅದನ್ನು ಡಿಲೀಟ್ ಮಾಡಿದ್ರು.

ಕಾಂಗ್ರೆಸ್ ಪಕ್ಷದ ತಪ್ಪುಗಳೇನು? ಅದನ್ನು ಯಾವ ರೀತಿ ಜನರ ಮುಂದೆ ತೆರೆದಿಡಬೇಕು ಎಂಬುದನ್ನೆಲ್ಲ ಬಿಜೆಪಿ ಕಾರ್ಯಕರ್ತರಿಗೆ ಈ ಡಾಕ್ಯುಮೆಂಟ್ ನಲ್ಲಿ ವಿವರಿಸಲಾಗಿತ್ತು. ಅದನ್ನು ಪ್ರತ್ಯೇಕವಾಗಿ ಮೆಸೇಜ್ ಮಾಡುವ ಬದಲು ಪರೇಶ್ ರಾವಲ್, ಟ್ವಿಟ್ಟರ್ ನಲ್ಲಿ ಹಾಕಿಬಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...