alex Certify
ಕನ್ನಡ ದುನಿಯಾ       Mobile App
       

Kannada Duniya

ಕರುಣಾನಿಧಿ ತಮ್ಮವರಿಗಾಗಿ ಬಿಟ್ಟು ಹೋಗಿರುವ ಆಸ್ತಿ ಎಷ್ಟು ಗೊತ್ತಾ…?

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರು ಇನ್ನು ನೆನಪು ಮಾತ್ರ. ಮರೀನಾ ಬೀಚ್ ನಲ್ಲಿರುವ ಕರುಣಾನಿಧಿಯವರ ಸಮಾಧಿಗೆ ಈಗ ಅಭಿಮಾನಿಗಳು ಭೇಟಿ ನೀಡಿ ಪೂಜೆ ಮಾಡ್ತಿರೋ ದೃಶ್ಯಗಳು ತಮಿಳುನಾಡಿನಲ್ಲಿ ಕಾಮನ್ ಆಗಿಬಿಟ್ಟಿವೆ. ಇದರ ನಡುವೆ ಕರುಣಾನಿಧಿಯವರ ಆಸ್ತಿ ಮೌಲ್ಯ ಎಷ್ಟು ಅನ್ನೋದ್ರ ಚರ್ಚೆಯೂ ಈಗ ಶುರುವಾಗಿದೆ.

ಆರು ದಶಕಗಳ ಕಾಲ ತಮಿಳುನಾಡಿನ ರಾಜಕಾರಣದಲ್ಲಿ ಸಕ್ರಿಯವಾಗಿದ್ದು, ಎರಡು ದಶಕಗಳಿಗೂ ಹೆಚ್ಚು ಕಾಲ ತಮಿಳುನಾಡನ್ನು ಆಳಿದ್ದಾರೆ. 2016ರಲ್ಲಿ ವಿಧಾನಸಭಾ ಚುನಾವಣೆಗೆ ಅವರು ಸಲ್ಲಿಸಿರುವ ಅಫಿಡವಿಟ್ ನಲ್ಲಿ ದಾಖಲಾದ ಆಸ್ತಿ ಮೌಲ್ಯದ ವಿವರ ಹೀಗಿದೆ.

2016 ರಲ್ಲಿ ಸಲ್ಲಿಕೆಯಾದ ಮಾಹಿತಿಯ ಪ್ರಕಾರ ಕರುಣಾನಿಧಿಯವರ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ತಮ್ಮ ಹೆಸರಿನಲ್ಲಿ ಒಟ್ಟು 13 ಕೋಟಿ 42 ಲಕ್ಷ ರೂಪಾಯಿಯ ಆಸ್ತಿ ಮೌಲ್ಯ ಇದೆ ಅಂತ ಅವರು ಘೋಷಣೆ ಮಾಡಿದ್ದಾರೆ. 2014-15ರ ಹಣಕಾಸು ವರ್ಷದಲ್ಲಿ 1 ಕೋಟಿ 21 ಲಕ್ಷದ ಆದಾಯದ ವಿವರವನ್ನು ಅವರು ಸಲ್ಲಿಸಿದ್ದು, ಕೈನಲ್ಲಿ 50 ಸಾವಿರ ರೂಪಾಯಿ ಹಣವಿದೆ ಅಂತ ಘೋಷಣೆ ಮಾಡಿದ್ದಾರೆ. 12.73 ಕೋಟಿ ರೂಪಾಯಿ ಬ್ಯಾಂಕ್ ನಲ್ಲಿ ಠೇವಣಿ ಇದ್ದು , ಅಂಜುಗಮ್ ಪ್ರಿಂಟರ್ಸ್ ನ ಮೌಲ್ಯ 10 ಲಕ್ಷದ 22 ಸಾವಿರ ರೂಪಾಯಿ. ಕರುಣಾನಿಧಿಯವರ ಎರಡನೇ ಪತ್ನಿ ದಯಾಳು ಅಮ್ಮಾಳ್ ಹೆಸರಿನಲ್ಲಿ 99 ಲಕ್ಷದ 67 ಸಾವಿರ ರೂಪಾಯಿ ಆಸ್ತಿ ಬ್ಯಾಂಕ್ ನಲ್ಲಿ ಠೇವಣಿ ರೂಪದಲ್ಲಿದೆ.

ಕಲೈಜ್ಞರ್ ಟಿವಿ ಯಲ್ಲಿ ಆರು ಕೋಟಿ ಮೌಲ್ಯದ 60 ಲಕ್ಷ ಷೇರುಗಳಿವೆ. 15.65 ಲಕ್ಷದ ಆಭರಣಗಳಿವೆ. ಕರುಣಾನಿಧಿಯವರ ಮೂರನೇ ಪತ್ನಿ ರಜತಿ ಅಮ್ಮಾಳ್ ಹೆಸರಿನಲ್ಲಿ 9494 ಚದರ ಅಡಿಯ ಮನೆ, 22.28 ಲಕ್ಷ ರೂಪಾಯಿಯ ಬ್ಯಾಂಕ್ ಠೇವಣಿ, 2.50 ಕೋಟಿ ರೂಪಾಯಿ ಮೌಲ್ಯದ ಷೇರುಗಳು ಮತ್ತು 13.98 ಲಕ್ಷ ಮೌಲ್ಯದ ಆಭರಣಗಳಿವೆ.

ಕರುಣಾನಿಧಿಯವರ ಹೆಸರಿನಲ್ಲಿ ಒಂದೇ ಒಂದು ಕಾರು ಮತ್ತು ಮನೆಯೂ ಇಲ್ಲ. ತಿರುವನೂರ್ನಲ್ಲಿ ದಯಾಳು ಅಮ್ಮಾಳ್ ಅವರ ಹೆಸರಿನಲ್ಲಿ 2520 ಚದರ ಅಡಿಯ ಮನೆ ಮತ್ತು ರಜತಿ ಅಮ್ಮಾಳ್ ಅವರ ಹೆಸರಿನಲ್ಲಿ 9494 ಚದರ ಅಡಿಯ ಮನೆ ಇದೆ. ಒಟ್ಟಾರೆ ಕರುಣಾನಿಧಿಯವರ ಪತ್ನಿಯರು 41.13 ಕೋಟಿಯ ಚರಾಸ್ಥಿಗೆ ಮಾಲೀಕರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...