alex Certify
ಕನ್ನಡ ದುನಿಯಾ       Mobile App
       

Kannada Duniya

ಕಲ್ಲು ತೂರಾಟ ನಡೆಸುವವರನ್ನು ಪತ್ತೆ ಹಚ್ಚಲು ಪೊಲೀಸರು ಮಾಡಿದ್ದಾರೆ ಹೊಸ ಪ್ಲಾನ್

ಅಪರಾಧಿಗಳ ಪತ್ತೆಗೆ ಪೊಲೀಸರು ವೇಷ ಬದಲಿಸಿ, ಆರೋಪಿಗಳಿಗೆ ಬಲೆ ಬೀಸುವದು ಗೊತ್ತೇ ಇದೆ. ಇದ್ರಂತೆ ಜಮ್ಮು-ಕಾಶ್ಮೀರ್ ಪೊಲೀಸರು ರಾಜ್ಯದಲ್ಲಿ ನಡೆಯುವ ಕಲ್ಲು ತೂರಾಟ ಪ್ರಕರಣವನ್ನು ಹತ್ತಿಕ್ಕಿ, ಜನರು ನೆಮ್ಮದಿಯ ಜೀವನ ಸಾಗಿಸಲು ಹೊಸ ಪ್ಲಾನ್ ಮಾಡಿಕೊಂಡಿದ್ದಾರೆ.

ಹೌದು….ಜಮ್ಮು-ಕಾಶ್ಮೀರ್ ಪೊಲೀಸರಿಗೆ ಕಲ್ಲು ತೂರಾಟ ಪ್ರಕರಣ ತಲೆ ಬಿಸಿ ತಂದಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ಖಾಕಿ ಪಡೆ ಹೆಣೆದುಕೊಂಡ ರಣತಂತ್ರ ನಿಜಕ್ಕೂ ಆರೋಪಿಗಳಿಗೆ ಶಾಕ್ ನೀಡಿದೆ.

ಕಲ್ಲು ತೂರಾಟ ಮಾಡುವ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು, ಹೊಸ ಅವತಾರದಲ್ಲಿ ಬೀದಿಗೆ ಇಳಿದಿದ್ದಾರೆ. ಈ ವೇಳೆ ಕೆಲ ಪೊಲೀಸ್ ಅಧಿಕಾರಿಗಳು ಕಲ್ಲು ತೂರಾಟ ನಡೆಸುವ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಶುಕ್ರವಾರ ಪ್ರಾರ್ಥನೆ ಮುಗಿದ ಬಳಿಕ ಕಲ್ಲು ತೂರಾಟ ನಡೆದಿದೆ. ಈ ವೇಳೆ ಕಲ್ಲು ತೂರುತ್ತಿದ್ದ ಯುವಕರನ್ನು, ವೇಷಧಾರಿ ಪೊಲೀಸರು ಬಂಧಿಸಿದ್ದಾರೆ.

ಕಲ್ಲು ತೂರಾಟ ಮಾಡುತ್ತಿದ್ದ ವ್ಯಕ್ತಿ ನಕಲಿ ಪಿಸ್ತೂಲ್ ತೋರಿಸಿ ಹೆದರಿಸಲು ಮುಂದಾಗಿದ್ದಾನೆ. ಈ ವೇಳೆ ವೇಷಧಾರಿ ಪೊಲೀಸರು ಆರೋಪಿಗಳನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. 2010 ರಲ್ಲಿಯೂ ಜಮ್ಮು ಕಾಶ್ಮೀರ್ ಪೊಲೀಸರು ಮಾರುವೇಷದಲ್ಲಿ ಅಪರಾಧಿಗಳಿಗೆ ಬಲೆ ಬೀಸಿದನ್ನು ಸ್ಮರಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...