alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡ- ಹೆಂಡತಿ ಜಗಳದಿಂದ ಬಯಲಾಯ್ತು ಕಿಡ್ನಿ ಮಾರಾಟ ಜಾಲ

apollo-hospital-14ದೆಹಲಿಯಲ್ಲಿ ನಡೆಯುತ್ತಿದ್ದ ಅಂತರರಾಜ್ಯ ಕಿಡ್ನಿ ಮಾರಾಟ ಜಾಲ ಈಗ ಬಯಲಾಗಿದೆ. ಕಡು ಬಡವರಿಗೆ ಹಣದ ಆಮಿಷ ಒಡ್ಡಿ ಅವರಿಂದ ಕಿಡ್ನಿ ಪಡೆದು ಅದನ್ನು ಅಧಿಕ ಬೆಲೆಗೆ ಈ ತಂಡ ಮಾರಾಟ ಮಾಡುತ್ತಿದ್ದು, ಪೊಲೀಸರು ಈ ಸಂಬಂಧ ಈಗಾಗಲೇ ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಜಾಲ ಬಯಲಾಗಲು ಕಾರಣವಾಗಿದ್ದು ಗಂಡ- ಹೆಂಡತಿ ಜಗಳ ಎಂಬುದು ಆಶ್ಚರ್ಯವಾದರೂ ಸತ್ಯ.

ಸೋಮವಾರ ಸಂಜೆ ದೆಹಲಿಯ ಸರಿತಾ ವಿಹಾರ್ ನಲ್ಲಿರುವ ಅಪೊಲೋ ಆಸ್ಪತ್ರೆ ಬಳಿ ಗಂಡ- ಹೆಂಡತಿ ಜೋರು ಜಗಳವಾಡುತ್ತಿರುವುದರ ಕುರಿತು ಪೊಲೀಸ್ ಕಂಟ್ರೋಲ್ ರೂಮಿಗೆ ಕರೆ ಬಂದಿದೆ. ಸ್ಥಳಕ್ಕೆ ತೆರಳಿದ ಪೊಲೀಸರು ಅವರಿಬ್ಬರನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಲು ಮುಂದಾದರೂ ಅವರುಗಳು ಬಾಂಗ್ಲಾದಲ್ಲಿ ಮಾತನಾಡುತ್ತಿದ್ದ ಕಾರಣ ಪೊಲೀಸರಿಗೆ ವಿಷಯ ಗೊತ್ತಾಗಿಲ್ಲ.

ಕಡೆಗೆ ಭಾಷೆ ಗೊತ್ತಿದ್ದವನೊಬ್ಬನನ್ನು ಕರೆದುಕೊಂಡು ಬಂದ ಪೊಲೀಸರಿಗೆ ಬೆಚ್ಚಿ ಬೀಳಿಸುವಂತಹ ಸಂಗತಿ ತಿಳಿದುಬಂದಿದೆ. ಮಹಿಳೆಯ ಪತಿ ಮೂರು ಲಕ್ಷ ರೂಪಾಯಿಗಳಿಗೆ ಆಕೆಯ ಕಿಡ್ನಿಯನ್ನು ಮಾರಾಟ ಮಾಡಿದ್ದು, ಆದರೆ ತನಗೆ ಒಂದೂವರೆ ಲಕ್ಷ ರೂಪಾಯಿ ಮಾತ್ರ ನೀಡಿದ್ದಾನೆಂದು ಮಹಿಳೆ ದೂರಿದ್ದಾಳೆ. ಇದರ ಹಿಂದೆ ದೊಡ್ಡ ಜಾಲವೇ ಕಾರ್ಯ ನಿರ್ವಹಿಸುತ್ತಿರಬಹುದೆಂದು ಶಂಕೆಗೊಂಡ ಪೊಲೀಸರು ಸಮಗ್ರ ವಿಚಾರಣೆ ನಡೆಸಿ ಮಾರನೇ ದಿನ ದಾಳಿ ನಡೆಸಿದ್ದು, ಮೂವರು ಮಧ್ಯವರ್ತಿಗಳೂ ಸೇರಿದಂತೆ 6 ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೇ ಹಣಕ್ಕಾಗಿ ಕಿಡ್ನಿ ಮಾರಾಟ ಮಾಡಲು ಹೊರ ರಾಜ್ಯದಿಂದ ಬಂದಿದ್ದ ಇಬ್ಬರು ಮಹಿಳೆಯರನ್ನು ಜಾಲದಿಂದ ರಕ್ಷಿಸಿದ್ದಾರೆ. ಪ್ರಕರಣದ ಕಿಂಗ್ ಪಿನ್ ಪರಾರಿಯಾಗಿದ್ದು, ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ತಂಡ ಈಗಾಗಲೇ ಹಲವಾರು ಮಂದಿಯ ಕಿಡ್ನಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆಂಬ ಶಂಕೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...