alex Certify
ಕನ್ನಡ ದುನಿಯಾ       Mobile App
       

Kannada Duniya

ಕಳುವಾಗಿದ್ದ ಕಾರ್ ಸಿಕ್ಕಿದ್ದೇಗೆ ಗೊತ್ತಾ…?

smsವರ್ಷದ ಹಿಂದೆ ಕಳುವಾಗಿದ್ದ ಕಾರ್ ಪುನಃ ಮಾಲೀಕರಿಗೆ ಸಿಕ್ಕಿದೆ. ಇದಕ್ಕೆ ಕಾರಣವಾಗಿದ್ದು ಒಂದು ಎಸ್ಎಂಎಸ್ ಎಂಬುದು ಗಮನಾರ್ಹ. ತಮಗೆ ಬಂದಿದ್ದ ಎಸ್ಎಂಎಸ್ ವಿವರವನ್ನು ಪೊಲೀಸರಿಗೆ ನೀಡಿದ ಕಾರ್ ಮಾಲೀಕರು ಕಾರು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇಂತದೊಂದು ಘಟನೆ ನಡೆದಿರುವುದು ಕೇರಳದ ಕೊಟ್ಟಾಯಂನಲ್ಲಿ. ಮಂಗ್ನಾಮ್ ನ ಮಿಲನ್ ಎಂಬವರ ಕಾರನ್ನು ವರ್ಷದ ಹಿಂದೆ ಕಿಶೋರ್ ಮತ್ತಾತನ ಸ್ನೇಹಿತ ಅರುಣ್ ಗೋಪಾನ್ ಬಾಡಿಗೆಗೆ ಪಡೆದಿದ್ದರು. ಆದರೆ ಇವರುಗಳು ಈ ಕಾರನ್ನು ಬೆಂಗಳೂರಿನಲ್ಲಿ ನೆಲೆಸಿರುವ ಅಲೆಪ್ಪಿಯ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು.

ಕಾರು ಕಳೆದುಕೊಂಡ ಮಿಲನ್ ಪೊಲೀಸರಿಗೆ ದೂರು ನೀಡಿದ್ದರೂ ಕಾರು ಪತ್ತೆಯಾಗಿರಲಿಲ್ಲ. ಇದು ಕಳವು ಮಾಡಲಾದ ಕಾರ್ ಎಂಬುದರ ಅರಿವಿಲ್ಲದೆ ಅದನ್ನು ಕೊಂಡುಕೊಂಡ ವ್ಯಕ್ತಿ ಇತ್ತೀಚೆಗೆ ಬೆಂಗಳೂರಿನ ಸರ್ವೀಸ್ ಸೆಂಟರ್ ನಲ್ಲಿ ಸರ್ವೀಸ್ ಗೆ ಬಿಟ್ಟಿದ್ದಾರೆ. ಆದರೆ ಈ ಸರ್ವೀಸ್ ಸೆಂಟರ್ ನಲ್ಲಿ ಕಾರಿನ ನೈಜ ಮಾಲೀಕ ಮಿಲನ್ ರ ಮೊಬೈಲ್ ನಂಬರ್ ಈ ಮೊದಲೇ ರಿಜಿಸ್ಟರ್ ಆಗಿದ್ದು, ಸಹಜವಾಗಿಯೇ ಅವರ ಮೊಬೈಲ್ ಗೆ ಮೆಸೇಜ್ ಹೋಗಿದೆ. ಮಿಲನ್ ಕೂಡಲೇ ಸ್ಥಳೀಯ ಪೊಲೀಸರನ್ನು ಭೇಟಿ ಮಾಡಿ ಮಾಹಿತಿ ನೀಡಿದ್ದಾರೆ. ಇದೀಗ ಬೆಂಗಳೂರು ಪೊಲೀಸರ ನೆರವಿನಿಂದ ಕಾರನ್ನು ವಶಕ್ಕೆ ಪಡೆಯಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...