alex Certify
ಕನ್ನಡ ದುನಿಯಾ       Mobile App
       

Kannada Duniya

ಗೃಹಿಣಿ ಬಿಚ್ಚಿಟ್ಟಿದ್ದಾಳೆ ಪ್ರಶ್ನೆ ಪತ್ರಿಕೆ ಬಹಿರಂಗದ ಹಿಂದಿನ ಇಂಚಿಂಚೂ ಮಾಹಿತಿ

ಶನಿವಾರ ಸಿ ಬಿ ಎಸ್ ಸಿ 12ನೇ ಕ್ಲಾಸ್ ನ ಅರ್ಥಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಹಿಮಾಚಲ ಪ್ರದೇಶದ ಉನಾ ಎಂಬಲ್ಲಿ ಖಾಸಗಿ ಶಾಲೆಯ  ಶಿಕ್ಷಕ ರಾಕೇಶ್ ಕುಮಾರ್ ಹಾಗೂ ಕ್ಲರ್ಕ್ ಗಳಾದ ಅಮಿತ್ ಕುಮಾರ್ ಹಾಗೂ ಅಶೋಕ್ ಕುಮಾರ್ ಎಂಬುವವರನ್ನು ಬಂಧಿಸಲಾಗಿದೆ.

ಸುಮಾರು 40 ವಾಟ್ಸಾಪ್ ಗ್ರೂಪ್ ಗಳಲ್ಲಿ ವಿನಿಮಯಗೊಂಡಿದ್ದ ಕೈಬರಹದ ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದಿರುವ 37 ವಿದ್ಯಾರ್ಥಿಗಳು, ಐವರು ಟೀಚರ್ಸ್, ಮೂವರು ಖಾಸಗಿ ಶಿಕ್ಷಕರು ಹಾಗೂ ಇಬ್ಬರು ಗೃಹಿಣಿಯರನ್ನು ಪತ್ತೆ ಹಚ್ಚಲಾಗಿದೆ.

ವಾಟ್ಸಾಪ್ ನಲ್ಲಿ ಪ್ರಶ್ನೆ ಪತ್ರಿಕೆ  ಪಡೆದುಕೊಂಡ ವಿದ್ಯಾರ್ಥಿಯೊಬ್ಬ ಪಂಜಾಬ್ ನಲ್ಲಿರುವ ತನ್ನ ಆಂಟಿ ಕಳುಹಿಸಿದ್ದು, ಎಂದು ನೀಡಿದ್ದ ಮಾಹಿತಿಯನ್ನಾಧರಿಸಿ ಈ ಪ್ರಕರಣ ಬೇಧಿಸಿದ್ದಾರೆ. ಆಕೆಯ ಮಗ ಹಾಗೂ ಸೋದರಳಿಯನಿಗಾಗಿ ಸಂಬಂಧಿ ಟೀಚರ್ ಆಗಿದ್ದ ರಾಕೇಶ್ ಗೆ ಹೇಳಿ ಈ ಪ್ರಶ್ನೆ ಪತ್ರಿಕೆ ಮಾಹಿತಿ ಪಡೆದುಕೊಂಡಿದ್ದರು. ಆದರೆ ಇದನ್ನೇ ಮಕ್ಕಳು ಲೀಕ್ ಮಾಡಿದ್ದು, ಎಲ್ಲಾ ಕಡೆ ಶೇರ್ ಆಗಿತ್ತು ಎಂಬುದಾಗಿ ಪೊಲೀಸರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...