alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ-ಪತ್ನಿ ಸುಖ ನಿದ್ರೆಯಲ್ಲಿದ್ದಾಗ..!?

tonk-2

ರಾಜಸ್ತಾನದ ಮಲ್ಪುರಾದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ತಡರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಹಾಗೂ ಹಣವನ್ನು ದೋಚಿದ್ದಾರೆ. ವಿಶೇಷವೆಂದ್ರೆ ಮನೆಯಲ್ಲಿ ಕಳ್ಳತನವಾಗ್ತಿದ್ದ ವೇಳೆ ಪತಿ-ಪತ್ನಿ ಸುಖ ನಿದ್ರೆಗೆ ಜಾರಿದ್ದರು.

ಘಟನೆ ಮಲ್ಪುರಾದ ಆದರ್ಶ ನಗರದಲ್ಲಿ  ನಡೆದಿದೆ. ರಾಮವತಾರ್ ಗುಪ್ತಾ ಮತ್ತು ಸುನಿತಾ ಗುಪ್ತಾ ಮನೆಯ ಕೋಣೆಯಲ್ಲಿ ಕುಳಿತಿದ್ದರು. ಈ ವೇಳೆ ಕಿಟಕಿಯಿಂದ ನುಗ್ಗಿದ ಕಳ್ಳರು ಮನೆಯಲ್ಲಿದ್ದ ಒಂದು ಲಕ್ಷ ರೂಪಾಯಿ ಹಾಗೂ ಎಂಟು ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಬೆಳಿಗ್ಗೆ ಎದ್ದ ತಕ್ಷಣ ಬಟ್ಟೆ, ವಸ್ತು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದರಿಂದ ಕಳ್ಳತನವಾಗಿರುವುದು ದಂಪತಿಗೆ ತಿಳಿದಿದೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಮಲ್ಪುರದಲ್ಲಿ ಆಗಸ್ಟ್ ತಿಂಗಳಲ್ಲಿ ನಡೆದ ಐದನೇ ಘಟನೆ ಇದಾಗಿದೆ. ಇದಾದ ನಂತ್ರ ಪೊಲೀಸರು ರಾತ್ರಿ ಗಸ್ತು ತಿರುಗುತ್ತಿದ್ದಾರೆ. ಆದ್ರೂ ಕಳ್ಳತನ ಮಾತ್ರ ನಿಂತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...