alex Certify
ಕನ್ನಡ ದುನಿಯಾ       Mobile App
       

Kannada Duniya

251 ರೂಪಾಯಿಗೆ ಸಿಗಲಿಲ್ಲ ಫೋನ್, 500 ರೂ. ಇಎಂಐ ನಲ್ಲಿ ಸಿಗುತ್ತಿದೆ ಮನೆ..!

home_emi

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಅಂತಾರೆ. ಮನೆ ಕಟ್ಟೋದಿರಲಿ, ಕಟ್ಟಿದ ಮನೆ ಖರೀದಿಸೋದು ಈಗ ಸುಲಭದ ಮಾತಲ್ಲ. ಅದ್ರಲ್ಲೂ ಮುಂಬೈಯಂತಹ ಮಹಾನಗರದಲ್ಲಿ ಮನೆ ಖರೀದಿ ಮಾಡೋದು ಒಂದು ಕನಸೇ ಸರಿ.

ಈ ಸಮಯದಲ್ಲಿ ಶೇಕಡಾ 80ರಷ್ಟು ರಿಯಾಯಿತಿ ದರದಲ್ಲಿ ಮನೆ ಖರೀದಿಸಿ ಅಂತಾ ನಿಮ್ಮ ಮುಂದೆ ಆಫರ್ ಇಟ್ಟರೆ ಯಾರು ಕಣ್ಣುಮುಚ್ಚಿ ಕುಳಿತುಕೊಳ್ತಾರೆ ಹೇಳಿ. 500 ರೂಪಾಯಿ ಇಎಂಐ ಹಾಗೂ ರಿಜಿಸ್ಟ್ರೇಷನ್ ಗೆ ಕೇವಲ 5,600 ರೂಪಾಯಿ ಅಂದ್ರೆ ನನಗೂ ಇರಲಿ, ನಮ್ಮ ಮನೆಯವರಿಗೂ ಇರಲಿ ಅಂತಾ ಮುಂದೆ ಬರುವವರೇ ಹೆಚ್ಚು.

ಮಹಾರಾಷ್ಟ್ರ ಅರ್ಬನ್ ಹೌಸಿಂಗ್ ಪಾಲಿಸಿ ಹೆಸರಲ್ಲಿ ಶೇಕಡಾ 80 ರಷ್ಟು ರಿಯಾಯಿತಿಯಲ್ಲಿ ಮನೆ ಕಟ್ಟಿ ಎಂಬ ಒಂದು ಆಫರ್ ಬಂದಿತ್ತು. ರಿಯಾಯಿತಿ ದರದಲ್ಲಿ ಮನೆ ಬೇಕಾದಲ್ಲಿ ಈ ಫಾರ್ಮ್ ತುಂಬಿ ಜೊತೆಗೆ ಮುಂಗಡ ಹಣ ಕಳುಹಿಸುವಂತೆ ದೆಹಲಿ ವಿಳಾಸ ನೀಡಲಾಗಿತ್ತು. ಜಾಹೀರಾತು ನೋಡಿದ ಅನೇಕರು ಮುಂಗಡ ಹಣ ನೀಡಿದ್ದಾರೆ. ಆದ್ರೆ ದೆಹಲಿಗೆ ಹೋಗಿ ನೋಡಿದ್ರೆ ಈ ವಿಳಾಸದಲ್ಲಿ ಯಾವುದೇ ಕಚೇರಿ ಇರಲಿಲ್ಲ. ಆಗ ಮೋಸ ಹೋಗಿರುವುದು ಗೊತ್ತಾಗಿದೆ. ಹಣ ಕಟ್ಟಿದ ನೂರಾರು ಮಂದಿ ಈಗ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ಸರ್ಕಾರದಿಂದ ಈ ರೀತಿಯ ಯಾವುದೇ ಸ್ಕೀಮ್ ಜಾರಿಯಾಗಿಲ್ಲ ಎಂದು ಮಹಾರಾಷ್ಟ್ರದ ವಸತಿ ಸಚಿವ ಪ್ರಕಾಶ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಈ ಸ್ಕೀಮ್ ನೋಡಿ ಮೋಸ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...