alex Certify
ಕನ್ನಡ ದುನಿಯಾ       Mobile App
       

Kannada Duniya

ಉನ್ನಾವ್ ಅತ್ಯಾಚಾರ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್

ಉತ್ತರ ಪ್ರದೇಶದಲ್ಲಿ 16 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಮತ್ತವರ ಸಹೋದರ ನಡೆಸಿದ ಅತ್ಯಾಚಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಕಳೆದ ವರ್ಷ ಬಾಲಕಿ ಮೇಲೆ ದೌರ್ಜನ್ಯ ನಡೆದಿತ್ತು. ಬಾಲಕಿಯ ಹೆತ್ತವರು ದೂರು ಸಹ ದಾಖಲಿಸಿದ್ದರು.

ಆದ್ರೆ ಆರೋಪಿ ಜನಪ್ರತಿನಿಧಿಯಾಗಿದ್ದರಿಂದ ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ನೊಂದ ಬಾಲಕಿ ಕಳೆದ ಭಾನುವಾರ ಸಿಎಂ ಯೋಗಿ ಆದಿತ್ಯನಾಥ್ ನಿವಾಸದ ಎದುರು ಆತ್ಮಹತ್ಯೆಗೆ ಯತ್ನಿಸಿದ್ದಳು.

ಶಾಸಕ ಕುಲದೀಪ್ ಸಿಂಗ್ ಸೆಂಗರ್ ಮತ್ತವರ ಸಹೋದರನ ವಿರುದ್ಧ ದಾಖಲಿಸಿದ್ದ ಪ್ರಕರಣ ಹಿಂಪಡೆಯಲು ಬಾಲಕಿಯ ತಂದೆ ನಿರಾಕರಿಸಿದ್ದರು. ಈ ಕಾರಣಕ್ಕೆ ಅವರ ಮೇಲೆ ದಾಳಿ ನಡೆಸಲಾಗಿತ್ತು. ಆತ ಮೃತಪಟ್ಟಿದ್ದಾರೆ.

ಆದ್ರೆ ಸಾವಿಗೂ ಮುನ್ನ ಬಾಲಕಿಯ ತಂದೆ ನೀಡಿರುವ ಹೇಳಿಕೆ ಈಗ ವೈರಲ್ ಆಗಿದೆ. ತನ್ನ ಮೇಲೆ ದಾಳಿ ಮಾಡಿದವರು ಯಾರು ಅನ್ನೋದನ್ನು ವೈದ್ಯಕೀಯ ಪರೀಕ್ಷೆ ಸಂದರ್ಭದಲ್ಲಿ ಆತ ಹೇಳಿದ್ದ. ಶಾಸಕ ಸಿಂಗ್ ಮತ್ತವರ ಸಹೋದರ ತಮ್ಮ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.

ಪೊಲೀಸರು ಇದನ್ನೆಲ್ಲ ನೋಡಿದ್ರೂ ರಕ್ಷಣೆಗೆ ಬರಲಿಲ್ಲ ಅಂತಾ ಆತ ಹೇಳಿಕೆ ನೀಡಿದ್ದ. ದೇಹದ ಮೇಲೆ ಸುಮಾರು 14 ಕಡೆಗಳಲ್ಲಿ ಆತನಿಗೆ ಮಾರಣಾಂತಿಕ ಗಾಯಗಳಾಗಿದ್ದವು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...