alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಟೀ ಮಾರಾಟಗಾರನ ತಿಂಗಳ ವಹಿವಾಟು ಕೇಳಿದ್ರೆ ದಂಗಾಗ್ತೀರಾ…!

ಮಹಾರಾಷ್ಟ್ರದ ಪುಣೆಯಲ್ಲಿರುವ ಟೀ ಮಾರಾಟಗಾರರೊಬ್ಬರ ತಿಂಗಳ ಆದಾಯ ಕೇಳಿದ್ರೇ ನೀವು ನಿಜಕ್ಕೂ ದಂಗಾಗುತ್ತೀರಿ. ಪುಣೆಯ ಮೂರು ಸ್ಥಳಗಳಲ್ಲಿ ಈ ಟೀ ಹೌಸ್ ಕಾರ್ಯ ನಿರ್ವಹಿಸುತ್ತಿದ್ದು, ಬಲು ಪ್ರಸಿದ್ದಿ ಪಡೆದಿದೆ.

ನವನಾಥ್ ಯವ್ಲೆ ಎಂಬವರು ಈ ಟೀ ಹೌಸ್ ಸಂಸ್ಥಾಪಕರಾಗಿದ್ದು, ಅವರ Yewle ಟೀ ಹೌಸ್ ತಿಂಗಳಿಗೆ 12 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದೆಯಲ್ಲದೇ ಒಂದೊಂದು ಟೀ ಅಂಗಡಿಯಲ್ಲೂ 10 ಕ್ಕೂ ಅಧಿಕ ಮಂದಿ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಸ್ವಾದಿಷ್ಟ ಟೀ ನೀಡುವ ಮೂಲಕ ಗ್ರಾಹಕರ ಮನಸೂರೆಗೊಂಡಿರುವ Yewle ಟೀ ಹೌಸ್ ಬ್ರಾಂಡ್ ನ್ನು ವಿದೇಶದಲ್ಲೂ ಪರಿಚಯಿಸಬೇಕೆಂಬ ಮಹತ್ವಾಕಾಂಕ್ಷಿ ಹೊಂದಿರುವ ನವನಾಥ್ ಯವ್ಲೆ, ಈ ದಿಸೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ. ನಮ್ಮ ಬ್ರಾಂಡ್ ಜನಪ್ರಿಯಗೊಂಡಿದ್ದು, ಭಾರತದ ವಿವಿಧೆಡೆ ಮಾತ್ರವಲ್ಲ ವಿದೇಶದಲ್ಲೂ ಮಳಿಗೆ ಆರಂಭಿಸುವ ಯೋಜನೆ ಹೊಂದಿದ್ದೇವೆ ಎಂದು ಅವರು ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...