alex Certify
ಕನ್ನಡ ದುನಿಯಾ       Mobile App
       

Kannada Duniya

ಸೈನಿಕ ಮಗನ ಚಿಕಿತ್ಸೆ ಮಾಡಿ 16 ಕೋಟಿ ಬಿಲ್ ಸೇನೆಗೆ ಕಳುಹಿಸಿದ ವೈದ್ಯ ತಂದೆ…!

ತಲೆ ಮೇಲಾದ ಗಾಯದ ಚಿಕಿತ್ಸೆಗೆ ಎಷ್ಟು ಬಿಲ್ ಬರಬಹುದು? ದೊಡ್ಡ ಗಾಯವಾದ್ರೆ ಒಂದು ಲಕ್ಷ ಬಿಲ್ ಬರಬಹುದು. ಆದ್ರೆ 16 ಕೋಟಿ ಬಿಲ್ ಬಂದಿದೆ ಅಂದ್ರೆ ನೀವು ನಂಬ್ತೀರಾ? ನಂಬಲೇಬೇಕು. ಮಧ್ಯಪ್ರದೇಶದ ಬಿಂಡ್ ಜಿಲ್ಲೆಯಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ಆಯುರ್ವೇದದ ವೈದ್ಯರೊಬ್ಬರು ಸೈನಿಕನ ಚಿಕಿತ್ಸೆ ಮಾಡಿ 16 ಕೋಟಿ ಬಿಲ್ ಪಾವತಿಸುವಂತೆ ಸೇನೆಗೆ ಬಿಲ್ ಪ್ರತಿ ಕಳುಹಿಸಿದ್ದಾರೆ. ವಿಶೇಷವೆಂದ್ರೆ ವೈದ್ಯ ಚಿಕಿತ್ಸೆ ನೀಡಿದ ಸೈನಿಕ ಬೇರಾರೂ ಅಲ್ಲ, ವೈದ್ಯನ ಮಗ.

ಆಯುಶ್ ಆಸ್ಪತ್ರೆ ವೈದ್ಯ ಡಾ. ಐ.ಎಸ್. ರಾಜವತ್ ಪುತ್ರ ಸೌರಭ್ ಸೇನೆಯಲ್ಲಿ ಕೆಲಸ ಮಾಡ್ತಿದ್ದಾರೆ. 2013ರಲ್ಲಿ ತಲೆಗೆ ಗಾಯವಾಗಿ ತಲೆ ನೋವು ಹಾಗೂ ತಲೆ ಸುತ್ತುವ ಸಮಸ್ಯೆ ಎದುರಾಗಿತ್ತು. ಕೆಲ ಸಮಯ ಸೇನೆಯೇ ಚಿಕಿತ್ಸೆ ನೀಡಿತ್ತು. ಆದ್ರೆ ಇದ್ರಿಂದ ಪ್ರಯೋಜನವಾಗಿರಲಿಲ್ಲ. ರಜೆ ಪಡೆದು ಸೌರಭ್ ಮನೆಗೆ ಬಂದಿದ್ದರು.

ವೈದ್ಯ ತಂದೆ ಸೌರಭ್ ಚಿಕಿತ್ಸೆ ಶುರುಮಾಡಿದ್ದರು. 2014 ರಿಂದ 2017 ರವರೆಗೆ ಚಿಕಿತ್ಸೆ ಮಾಡಿದ್ದರು. ಸೌರಭ್ ಆರೋಗ್ಯದಲ್ಲಿ ಸುಧಾರಣೆಯಾಗಿದೆ. ಸೌರಭ್ ತಂದೆ 6 ಕೋಟಿಯ ಎರಡು ಬಿಲ್ ಹಾಗೂ 4ಕೋಟಿಯ ಒಂದು ಬಿಲ್ ಸೇನೆಯ ಮುಖ್ಯ ಕಚೇರಿಗೆ ಕಳುಹಿಸಿದ್ದಾರೆ.

ಬಿಲ್ ನೋಡಿದ ಸೇನೆ ಕಂಗಾಲಾಗಿದೆ. ತನಿಖೆಗೆ ಆದೇಶ ನೀಡಿದೆ. ಸಿ ಎಂ ಹೆಚ್ ಒ ನ ಒಂದು ತಂಡ ಸ್ಥಳಕ್ಕೆ ಬಂದು ವೈದ್ಯರ ಕ್ಲಿನಿಕ್ ಗೆ ಬೀಗ ಜಡಿದಿದೆ. ಕೋಟಿ ಬಿಲ್ ಕಳಿಸಿರುವ ಆರೋಪವನ್ನು ವೈದ್ಯರು ತಳ್ಳಿ ಹಾಕಿದ್ದಾರೆ. ನಾನು ಒಟ್ಟು ಒಂದು ಲಕ್ಷ 60 ಸಾವಿರ ರೂ ಬಿಲ್ ಕಳುಹಿಸಿದ್ದೆ. ಅದು ಕೋಟಿ ಹೇಗಾಯ್ತು ಗೊತ್ತಿಲ್ಲ ಎಂದಿದ್ದಾರೆ ರಾಜವತ್. ಸೇನೆ ವಿರುದ್ಧ ರಾಜವತ್ ಗಂಭೀರ ಆರೋಪ ಕೂಡ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...