alex Certify
ಕನ್ನಡ ದುನಿಯಾ       Mobile App
       

Kannada Duniya

OMG! ನೀರು ಕೇಳಿದ ರೋಗಿಗೆ ಆಸಿಡ್ ಕೊಟ್ಟ ಆಸ್ಪತ್ರೆ ಸಿಬ್ಬಂದಿ

ಸಣ್ಣ ನಿರ್ಲಕ್ಷ್ಯವೂ ಎಂತಹ ಪ್ರಮಾದಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಮಾತ್ರೆ ನುಂಗಲು ನೀರು ಕೇಳಿದ ವೇಳೆ ಸಿಬ್ಬಂದಿಯೊಬ್ಬ ಮಾಡಿದ ಯಡವಟ್ಟು ವೃದ್ದ ರೋಗಿಯ ಸಾವಿಗೆ ಕಾರಣವಾಗಿದೆ.

ಇಂತದೊಂದು ದಾರುಣ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದ್ದು, ಗೋರಲ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ 60 ವರ್ಷದ ಮಹಿಳೆ ಶಾಮಲಿ ದೇವಿ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು.

ಶಸ್ತ್ರ ಚಿಕಿತ್ಸೆ ಬಳಿಕ ಅವರನ್ನು ವಾರ್ಡ್ ಗೆ ಶಿಫ್ಟ್ ಮಾಡಿದ್ದು, ನುಂಗಲು ಕೆಲವೊಂದು ಮಾತ್ರೆಗಳನ್ನು ನೀಡಲಾಗಿತ್ತು. ಶಾಮಲಿದೇವಿಯವರ ಕಣ್ಣಿಗೆ ಪಟ್ಟಿ ಕಟ್ಟಿದ್ದ ಕಾರಣ ಮಾತ್ರೆ ನುಂಗಲು ನೀರು ನೀಡುವಂತೆ ಸಿಬ್ಬಂದಿಯೊಬ್ಬನಿಗೆ ವೃದ್ದೆ ಕೇಳಿದ್ದಾರೆ.

ಆತ ನೀರಿನ ಬದಲು ಆಸಿಡ್ ಇದ್ದ ಬಾಟಲ್ ನೀಡಿದ್ದು, ಇದನ್ನು ಕುಡಿದ ಶಾಮಲಿ ದೇವಿ ನೋವಿನಿಂದ ಚೀರಾಡಲಾರಂಭಿಸಿದ್ದಾರೆ. ಕೂಡಲೇ ಅವರನ್ನು ಮತ್ತೊಂದು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗ ತನಿಖೆ ಆರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...