alex Certify
ಕನ್ನಡ ದುನಿಯಾ       Mobile App
       

Kannada Duniya

‘ಪದ್ಮಾವತ್’ ವಿರೋಧಿಸಿ ಶಾಲಾ ಬಸ್ ಗೆ ಕಲ್ಲು ತೂರಿದ್ರು ಪಾಪಿಗಳು

ಪದ್ಮಾವತ್ ದೇಶದಾದ್ಯಂತ ಬಿಡುಗಡೆಯಾಗಿದೆ. ಪದ್ಮಾವತ್ ವಿರೋಧಿಸಿ ಕರಣಿ ಸೇನೆ ಪ್ರತಿಭಟನೆ ಕೂಡ ಮುಂದುವರೆದಿದೆ. ಬುಧವಾರ ಗುರುಗ್ರಾಮ್ ನಲ್ಲಿ ಕರಣಿ ಸೇನೆ ಕಾರ್ಯಕರ್ತರು ಶಾಲಾ ಬಸ್ ಗೆ ಕಲ್ಲು ತೂರಿದ್ದಾರೆ. ಈ ವೇಳೆ ಶಾಲಾ ಬಸ್ ನಲ್ಲಿ ಮಕ್ಕಳಿದ್ದರು.

ಘಟನೆಯನ್ನು ಬಸ್ ನಲ್ಲಿ ಹೋಗ್ತಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿದ್ದಾರೆ. 13 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿರುವ ಸ್ಥಳೀಯ ಆಡಳಿತ ಹಾಗೂ ರಾಜಕಾರಣಿಗಳು ದಂಗಾಗಿದ್ದಾರೆ. ಟ್ವೀಟರ್ ಹಾಗೂ ಫೇಸ್ಬುಕ್ ನಲ್ಲಿ ಕಾರ್ಯಕರ್ತರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗ್ತಿದೆ.

ಜಿ.ಡಿ. ಗೋಯಂಕಾ ಸ್ಕೂಲಿನ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಮನೆಗೆ ಹೊರಟಿದ್ದ ಬಸ್ ಮೇಲೆ ಕಲ್ಲು ತೂರಾಟ ನಡೆದಿದೆ. ಬಸ್ ಚಾಲಕನ ತಿಳುವಳಿಕೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಸೀಟ್ ಕೆಳಗೆ ಅವಿತುಕೊಳ್ಳುವಂತೆ ಮಕ್ಕಳಿಗೆ ಚಾಲಕ ಸಲಹೆ ನೀಡಿದ್ದಾನೆ. ಮಕ್ಕಳು ಶಿಕ್ಷಕಿಯರನ್ನು ಹಿಡಿದುಕೊಂಡು ಅತ್ತಿದ್ದಾರೆ. ರಕ್ಷಿಸಿ ಅಂತಾ ಕೂಗಿಕೊಂಡಿದ್ದಾರೆ. ಕಲ್ಲು ತೂರಾಟದಿಂದ ಬಸ್ ಗ್ಲಾಸ್ ಪುಡಿಯಾಗಿದೆ. ಘಟನೆ ವೇಳೆ ಬಸ್ ನಲ್ಲಿ 22 ಮಕ್ಕಳಿದ್ದರು ಎನ್ನಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...