alex Certify
ಕನ್ನಡ ದುನಿಯಾ       Mobile App
       

Kannada Duniya

ವ್ಯಾಲೆಂಟೈನ್ಸ್ ಡೇ ಗಿಫ್ಟ್ ಖರೀದಿದಾರರಿಗೊಂದು ಗುಡ್ ನ್ಯೂಸ್

ಇದು ಪ್ರೇಮಿಗಳ ವಾರ. ರೋಸ್ ಡೇ, ಪ್ರಪೋಸ್ ಡೇ, ಚಾಕೋಲೇಟ್ ಡೇ, ಟೆಡ್ಡಿಬೇರ್ ಡೇ ಹೀಗೆ ವಾರ ಪೂರ್ತಿ ಪ್ರೇಮಿಗಳಿಗೆ ಸೀಮಿತ. ಪ್ರೇಮಿಗಳ ವಾರದಂದು honor ಬ್ರ್ಯಾಂಡ್ ಖುಷಿ ಸುದ್ದಿಯೊಂದನ್ನು ನೀಡಿದೆ. Honor 7X ನ ಸ್ಪೆಷಲ್ ರೆಡ್ ಎಡಿಶನ್ ಸೇಲ್ ಇಂದು ಶುರುವಾಗಲಿದೆ.

ಇ-ವೆಬ್ಸೈಟ್ ಅಮೆಜಾನ್ ಇಂಡಿಯಾದಲ್ಲಿ ಮಧ್ಯಾಹ್ನ 1 ಗಂಟೆಗೆ ಸೇಲ್ ಶುರುವಾಗಲಿದೆ. ಈ ಫೋನ್ ಡ್ಯುಯಲ್ ಕ್ಯಾಮರಾ ಸೆಟಪ್ ಹೊಂದಿದೆ. ಈ ಫೋನ್ ಜೊತೆ ಗ್ರಾಹಕರಿಗೆ ಏರ್ಟೆಲ್ ನಿಂದ 90 ಜಿಬಿ ಡೇಟಾ ಸಿಗ್ತಿದೆ. ಡ್ಯುಯೆಲ್ ಸಿಮ್ ಹೊಂದಿರುವ ಈ ಫೋನ್ ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿದೆ.

4ಜಿ ರ್ಯಾಮ್ ಜೊತೆ 32 ಮತ್ತು 64 ಜಿಬಿ ಸ್ಟೋರೇಜ್ ಫೋನ್ ನಲ್ಲಿದೆ. ಇದನ್ನು 256 ಜಿಬಿಯವರೆಗೆ ವಿಸ್ತರಿಸಬಹುದಾಗಿದೆ. ಒಂದು 16 ಮೆಗಾಫಿಕ್ಸಲ್ ಹಾಗೂ ಇನ್ನೊಂದು 2 ಮೆಗಾಫಿಕ್ಸಲ್ ರಿಯಲ್ ಕ್ಯಾಮರಾ ಅಳವಡಿಸಲಾಗಿದೆ. 8 ಮೆಗಾಫಿಕ್ಸಲ್ ಸೆಲ್ಫಿ ಕ್ಯಾಮರಾ ಇದ್ರಲ್ಲಿದೆ. honor 7X ಮೊಬೈಲ್ ಬೆಲೆ 12,999 ರೂಪಾಯಿ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...