alex Certify
ಕನ್ನಡ ದುನಿಯಾ       Mobile App
       

Kannada Duniya

ಕುದುರೆಯ ಕೋಪಕ್ಕೆ ನಜ್ಜುಗುಜ್ಜಾಗಿ ಹೋಯ್ತು ಕಾರ್

horse_650x400_61496647282

ಜೈಪುರದಲ್ಲಿ ಕುದುರೆಯೊಂದು ಕೋಪದ ಭರದಲ್ಲಿ ಕಾರಿಗೆ ಗುದ್ದಿದೆ. ಈ ಘಟನೆಯಲ್ಲಿ ಕಾರು ಚಾಲಕ ಹಾಗೂ ಕುದುರೆ ಇಬ್ಬರೂ ಗಾಯಗೊಂಡಿದ್ದಾರೆ. ಟ್ರಾಫಿಕ್ ಜಾಮ್ ಮಧ್ಯೆ ಹೋಗ್ತಾ ಇದ್ದ ಕುದುರೆಗೆ ಕಿರಿಕಿರಿ ಶುರುವಾಗಿತ್ತು. ಕಿವಿಗಡಚಿಕ್ಕುವ ಹಾರ್ನ್ ಸದ್ದು, ಜೊತೆಗೆ ಭಯಂಕರ ಬಿಸಿಲ ಝಳ.

ಓಡಿ ಓಡಿ ಸುಸ್ತಾಗಿದ್ದ ಕುದುರೆಗೆ ಕೋಪ ನೆತ್ತಿಗೇರಿದೆ. ಸಿಟ್ಟಿನಲ್ಲಿ ನುಗ್ಗಿ ಬಂದ ಕುದುರೆ ಎದುರಿನಿಂದ ಬರ್ತಾ ಇದ್ದ ಕಾರಿನ ಗಾಜಿಗೆ ತಲೆಯಿಂದ ಗುದ್ದಿದೆ. ಆ ರಭಸಕ್ಕೆ ಕಾರಿನ ಗಾಜು ಸಂಪೂರ್ಣ ಪುಡಿಪುಡಿಯಾಗಿತ್ತು. ಈ ಅವಘಡದಲ್ಲಿ ಅಶ್ವಕ್ಕೂ ಗಾಯವಾಗಿದೆ, ಕಾರು ಚಾಲಕ ಕೂಡ ಗಾಯಗೊಂಡಿದ್ದಾನೆ.

jaipur-horse_650x400_81496646902

ಕಾರಿನಲ್ಲಿ ಸಿಕ್ಕಿಹಾಕಿಕೊಂಡಿದ್ದ ಕುದುರೆ ಮತ್ತು ಚಾಲಕನನ್ನು ಹೊರಕ್ಕೆ ತೆಗೆಯಲು ಅರಣ್ಯಾಧಿಕಾರಿಗಳು 10 ನಿಮಿಷ ಕಷ್ಟಪಡಬೇಕಾಯ್ತು. ಸ್ಥಳೀಯರು ಕೂಡ ರಕ್ಷಣಾ ಕಾರ್ಯದಲ್ಲಿ ಕೈಜೋಡಿಸಿದ್ರು. ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ, ಕುದುರೆ ಸಿಟ್ಟಿನಿಂದಾಗಿ ತಾನೇ ಗಾಯಗೊಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...