alex Certify
ಕನ್ನಡ ದುನಿಯಾ       Mobile App
       

Kannada Duniya

ವಿಪಾಸನಾ ನೋಡಿ ಬಿಕ್ಕಿಬಿಕ್ಕಿ ಅತ್ತ ಹನಿಪ್ರೀತ್

ಡೇರಾ ಸಚ್ಚಾ ಆಶ್ರಮದ ಮುಖ್ಯಸ್ಥೆ ವಿಪಾಸನಾ ಹಾಗೂ ಗುರ್ಮಿತ್ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್ ಮುಖಾಮುಖಿಯಾಗಿದ್ದಾರೆ.  ಬಂಧನದ ನಂತ್ರ ಇದೇ ಮೊದಲ ಬಾರಿ ಡೇರಾಕ್ಕೆ ಆಪ್ತರಾಗಿರುವ ವ್ಯಕ್ತಿಯೊಬ್ಬರನ್ನು ಹನಿಪ್ರೀತ್ ನೋಡಿದ್ದಾಳೆ ಎನ್ನಲಾಗಿದೆ. ಪಂಚಕುಲ ಪೊಲೀಸ್ ಆದೇಶದ ಮೇರೆಗೆ ಸೆಕ್ಟರ್ 23ರ ಠಾಣೆಗೆ ಬಂದ ವಿಪಾಸನಾ, ಹನಿಪ್ರೀತ್ ಮುಂದೆ ಕುಳಿತು ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾಳೆ.

ವಿಪಾಸನಾಳನ್ನು ನೋಡ್ತಿದ್ದಂತೆ ಹನಿಪ್ರೀತ್ ಭಾವುಕಳಾಗಿದ್ದಾಳೆ. ಬಿಕ್ಕಿ ಬಿಕ್ಕಿ ಅತ್ತಿರುವ ಹನಿಪ್ರೀತ್, ವಿಪಾಸನಾಳನ್ನು ತಬ್ಬಿಕೊಂಡಿದ್ದಳಂತೆ. ಶುಕ್ರವಾರ ಪಂಚಕುಲ ಪೊಲೀಸರು ರಾಮ್ ರಹೀಮ್ ಮೂವರು ದೇವಿಗಳಾದ ಹನಿಪ್ರೀತ್,.ವಿಪಾಸನಾ ಹಾಗೂ ಸುಖದೀಪ್ ಕೌರ್ ರನ್ನು ಒಂದೇ ಕಡೆ ವಿಚಾರಣೆ ಮಾಡಿದ್ದಾರೆ.

ಪಂಚಕುಲಾದಲ್ಲಿ ನಡೆದ ಹಿಂಸೆ ಹಾಗೂ ಪೊಲೀಸರಿಗೆ ಬೇಕಾಗಿರುವ ಆದಿತ್ಯ ಹಾಗೂ ಪವನ್ ಬಗ್ಗೆಯೂ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದ್ದಾರೆ. ಸೆಪ್ಟೆಂಬರ್ 18ರಂದು ಪೊಲೀಸ್ ಮುಂದೆ ಹಾಜರಾಗಿದ್ದ ವಿಪಾಸನಾ ಆಗಸ್ಟ್ 25-26ರಂದು ಡೇರಾಕ್ಕೆ ಬಂದಿದ್ದಳು ಎಂದು ಮಾಹಿತಿ ನೀಡಿದ್ದಳು. ಅದನ್ನೇ ಪುನರುಚ್ಚರಿಸಿದ್ದಾಳೆ.

ಹನಿಪ್ರೀತ್ ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟಿದ್ದಾಳೆ ಎನ್ನಲಾಗ್ತಿದೆ. ಪಂಚಕುಲ ಹಿಂಸಾಚಾರದಲ್ಲಿ ತನ್ನ ಕೈವಾಡವಿದೆ ಎಂಬುದನ್ನು ಹನಿಪ್ರೀತ್ ಒಪ್ಪಿಕೊಂಡಿದ್ದಾಳಂತೆ. ಆದ್ರೆ ಇದ್ರಿಂದ ಯಾವುದೇ ಪ್ರಯೋಜನವಿಲ್ಲ. ಕೋರ್ಟ್ ಮುಂದೆ ಪೊಲೀಸರು ಹನಿಪ್ರೀತ್ ವಿರುದ್ಧ ಸೂಕ್ತ ಸಾಕ್ಷಿ ನೀಡಬೇಕಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...