alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಾಗಿ ನನ್ನ ಕೆಲಸ ಮಾಡಿದ್ದೇನೆ ಎಂದ ಹನಿಪ್ರೀತ್

ನವದೆಹಲಿ: ಕಳೆದ 39 ದಿನಗಳಿಂದ ನಾಪತ್ತೆಯಾಗಿದ್ದ ಗುರ್ಮಿತ್ ರಾಮ್ ರಹೀಂ ಸಿಂಗ್ ದತ್ತುಪುತ್ರಿ ಹನಿಪ್ರೀತ್ ಇನ್ಸಾನ್ ರಾಷ್ಟ್ರೀಯ ಮಾಧ್ಯಮವೊಂದರ ಎದುರು ಕಾಣಿಸಿಕೊಂಡಿದ್ದಾಳೆ.

ಡೇರಾ ಸಚ್ಚ ಸೌಧ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಂ ಸಿಂಗ್ ಸಾಧ್ವಿಗಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಆ ನಂತರದಲ್ಲಿ ಹನಿಪ್ರೀತ್ ನಾಪತ್ತೆಯಾಗಿದ್ದು, ಆಕೆಗಾಗಿ ಹರ್ಯಾಣ ಪೊಲೀಸರು ಹುಡುಕಾಟ ನಡೆಸಿದ್ದರು.

ಇದೀಗ ಪ್ರತ್ಯಕ್ಷಳಾಗಿರುವ ಹನಿಪ್ರೀತ್ ಮಾತನಾಡಿ, ರಾಮ್ ರಹೀಂ ಮುಗ್ಧರಾಗಿದ್ದು, ಶುದ್ಧ ವ್ಯಕ್ತಿತ್ವದವರಾಗಿದ್ದಾರೆ. ಅವರು ಕೋರ್ಟ್, ಜೈಲಿಗೆ ಹೋದ ಸಂದರ್ಭದಲ್ಲಿ ಮಗಳಾಗಿ ನಾನು ನನ್ನ ಕೆಲಸ ಮಾಡಿದ್ದೇನೆ. ಅವರ ಹಾಗೂ ನನ್ನ ನಡುವಿನ ಸಂಬಂಧ ಪರಿಶುದ್ಧವಾದ ತಂದೆ, ಮಗಳ ಸಂಬಂಧವಾಗಿದೆ ಎಂದು ತಿಳಿಸಿದ್ದಾಳೆ.

ನಾನು ಜೀವಭಯದಲ್ಲಿದ್ದೇನೆ. ನನಗೆ ಸಿನಿಮಾದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ ನಿರ್ದೇಶಕಿಯಾಗಬೇಕೆಂಬ ಆಸೆ ಇತ್ತು. ನನ್ನ ಮಾಜಿ ಪತಿ ನೀಡಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯೆ ನೀಡಲಾರೆ. ಕಾನೂನು ತಜ್ಞರ ನೆರವು ಪಡೆದು ಮುಂದುವರೆಯುತ್ತೇನೆ. ಮಾಧ್ಯಮಗಳಲ್ಲಿ ನನ್ನ ಹಾಗೂ ಬಾಬಾ ಸಂಬಂಧದ ಬಗ್ಗೆ ಬಂದ ವರದಿಗಳಿಂದ ಘಾಸಿಯಾಗಿದೆ ಎಂದು ಹೇಳಿದ್ದಾಳೆ.

ನಾನು ಬಾಬಾ ಬಂಧನ ಬಳಿಕ ಗಲಭೆಗೆ ಕಾರಣಳಾಗಿಲ್ಲ. ಆದರೂ ನನ್ನನ್ನು ದೇಶದ್ರೋಹಿ ಎನ್ನುವಂತೆ ಬಿಂಬಿಸಲಾಗಿದೆ. ಇದರಿಂದ ನೊಂದಿದ್ದೇನೆ. ತಂದೆ ಜೈಲಿಗೆ ಹೋದ ನಂತರ ಅಸಹಾಯಕಳಾಗಿದ್ದೇನೆ. ನಾನು ಕೋರ್ಟ್ ಗೆ ಹೋಗುತ್ತೇನೆ. ನನಗೆ ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...