alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಪ್ರೀತ್ ಗೆಳತಿ ಬಿಚ್ಚಿಟ್ಲು ಮುಚ್ಚಿಟ್ಟ ಸತ್ಯ

ಗುರ್ಮಿತ್ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್ ಗೆ ಆಕೆಯ ಸ್ನೇಹಿತೆಯೇ ವಿಲನ್ ಆಗಿದ್ದಾಳೆ. ಹನಿಪ್ರೀತ್ ಸ್ನೇಹಿತೆ ಪೊಲೀಸ್ ಮುಂದಿಟ್ಟ ಮಾಹಿತಿ ಕೇಳಿ ಪೊಲೀಸರು  ದಂಗಾಗಿದ್ದಾರೆ. ಗೆಳತಿ ನೀಡಿದ ಮಾಹಿತಿ ಆಧಾರದ ಮೇಲೆ ಪೊಲೀಸರು ಕೇಳಿದ ಪ್ರಶ್ನೆ ಹನಿಪ್ರೀತ್ ಆರೋಗ್ಯ ಹದಗೆಡುವಂತೆ ಮಾಡಿದೆ.

ಹನಿಪ್ರೀತ್ ರಾಮ್ ರಹೀಮ್ ಬಂಧನದ ನಂತ್ರ 45 ದಿನಗಳ ಕಾಲ ಎಲ್ಲಿದ್ದಳು ಎಂಬ ಪ್ರಶ್ನೆಗೆ ಈವರೆಗೂ ಹನಿಪ್ರೀತ್ ಸರಿಯಾಗಿ ಉತ್ತರ ನೀಡಿಲ್ಲ.ಆದ್ರೆ ಹನಿಪ್ರೀತ್ ಜೊತೆಗಿದ್ದ ಸುಖದೀಪ್ ಕೌರ್ ಎಲ್ಲವನ್ನೂ ಬಾಯ್ಬಿಟ್ಟಿದ್ದಾಳೆ. ವಾಸ್ತವವಾಗಿ ಹನಿಪ್ರೀತ್ ಪೊಲೀಸ್ ಕೈಗೆ ಸಿಕ್ಕಾಗ ಆಕೆ ಕಾರನ್ನು ಸುಖದೀಪ್ ಕೌರ್ ಓಡಿಸ್ತಾ ಇದ್ಲು. ಹಾಗಾಗಿ ಪೊಲೀಸರು ಆಕೆಯನ್ನೂ ಬಂಧಿಸಿದ್ದರು.

ಪೊಲೀಸ್ ಪ್ರಶ್ನೆಗೆ ಹನಿಪ್ರೀತ್ ಸರಿಯಾಗಿ ಉತ್ತರ ನೀಡದ ಕಾರಣ ಪೊಲೀಸ್ ಕಣ್ಣು ಸುಖದೀಪ್ ಕೌರ್ ಮೇಲೆ ಬಿದ್ದಿದೆ. ಸುಖದೀಪ್ ಕೌರ್ ಪೊಲೀಸರಿಗೆ ಹೆದರಿ ಎಲ್ಲವನ್ನೂ ಹೊರಗೆ ಹಾಕಿದ್ದಾಳೆ. 45 ದಿನಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಹನಿಪ್ರೀತ್ ಬರೋಬ್ಬರಿ 17 ಸಿಮ್ ಬಳಸಿದ್ದಳಂತೆ. ಡೆರಾ ಅನುಯಾಯಿಗಳ ಜೊತೆ ಸಂಪರ್ಕದಲ್ಲಿದ್ದ ಆಕೆ ಬಳಸಿದ ಸಿಮ್ ಎಸೆಯುತ್ತಿದ್ದಳಂತೆ. ಫೇಸ್ಬುಕ್,ವಾಟ್ಸ್ ಅಪ್ ಮೂಲಕವೂ ಅವರನ್ನು ಸಂಪರ್ಕಿಸುತ್ತಿದ್ದಳಂತೆ. ಡೆರಾ ಅನುಯಾಯಿಗಳು ಆಕೆಗೆ ಹಣ ನೀಡಿ ಹೋಗುತ್ತಿದ್ದರು ಎಂದು ಸುಖದೀಪ್ ಹೇಳಿದ್ದಾಳೆ. ಪೊಲೀಸರಿಗೆ ಬೇಕಾಗಿರುವ ಡೆರಾದ ಇನ್ನಷ್ಟು ಸದಸ್ಯರು ಎಲ್ಲಿ ಅಡಗಿದ್ದಾರೆಂಬ ಮಾಹಿತಿ ಹನಿಪ್ರೀತ್ ಗಿದೆ ಎಂದು ಸುಖದೀಪ್ ಹೇಳಿದ್ದಾಳೆ.

ಸುಖದೀಪ್ ಮಾಹಿತಿ ಹನಿಪ್ರೀತ್ ಸಂಕಷ್ಟಕ್ಕೆ ಕಾರಣವಾಗಿದೆ. ಹನಿಪ್ರೀತ್ ಗೆ ಇನ್ನಷ್ಟು ಪ್ರಶ್ನೆಗಳ ಸುರಿಮಳೆಯಾಗಲಿದೆ. ಹಾಗೆ ಸದ್ಯಕ್ಕೆ ಜೈಲಿನಿಂದ ಬಿಡುಗಡೆ ಸಿಗೋದು ಅನುಮಾನ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...