alex Certify
ಕನ್ನಡ ದುನಿಯಾ       Mobile App
       

Kannada Duniya

ರಾಮ್ ರಹೀಂನಿಂದ ಮಗು ಪಡೆಯಲು ಬಯಸಿದ್ಲು ಹನಿಪ್ರೀತ್

ಡೇರಾ ಸಚ್ಛಾ ಸೌಧದ ಗುರ್ಮೀತ್ ರಾಮ್ ರಹೀಂ ಸಿಂಗ್ ಹಾಗೂ ಆತನ ದತ್ತು ಪುತ್ರಿಯೆಂದು ಹೇಳಿಕೊಳ್ತಾ ಇರೋ ಹನಿಪ್ರೀತ್ ಇನ್ಸಾನ್ ಬಗ್ಗೆ ಬೆಳಕಿಗೆ ಬರುತ್ತಿರುವ ಒಂದೊಂದೇ ಮಾಹಿತಿಗಳು ನಿಜಕ್ಕೂ ಬೆಚ್ಚಿಬೀಳಿಸುವಂತಿವೆ. ಹನಿಪ್ರೀತ್ ಹಾಗೂ ರಾಮ್ ರಹೀಂ ರಹಸ್ಯವಾಗಿ ಮಗುವನ್ನು ಪಡೆಯಲು ಬಯಸಿದ್ದರು.

ಡೇರಾ ಸಚ್ಛಾ ಸೌಧದ ಉತ್ತರಾಧಿಕಾರಿಯಾಗಲು ಅವರಿಗೆ ಗಂಡು ಮಗುವೇ ಬೇಕಿತ್ತಂತೆ. ಹಾಗಾಗಿ ರಾಮ್ ರಹೀಂ ಹಾಗೂ ಹನಿಪ್ರೀತ್ ತಂದೆ-ಮಗಳ ಸಂಬಂಧ ಹೊಂದಿರಲಿಲ್ಲ ಎನ್ನುತ್ತಾರೆ ಭಕ್ತರು. ಡೇರಾ ಗುಹೆಯಲ್ಲಿ, ಅದರಲ್ಲೂ ಗುರ್ಮೀತ್ ಚೇಂಬರ್ ನಲ್ಲೇ ಹನಿಪ್ರೀತ್ ಮೇಲೆ ಅತ್ಯಾಚಾರ ನಡೆದಿತ್ತು ಎನ್ನಲಾಗ್ತಿದೆ.

ಇದೇ ವಿಚಾರವನ್ನಿಟ್ಟುಕೊಂಡು ರಾಮ್ ರಹೀಂಗೆ ಬ್ಲಾಕ್ ಮೇಲ್ ಮಾಡ್ತಿದ್ದ ಹನಿಪ್ರೀತ್ ತನಗೆ ಬೇಕಾಗಿದ್ದೆಲ್ಲವನ್ನೂ ಪಡೆದುಕೊಳ್ತಾ ಇದ್ಲು. ಅತ್ಯಾಚಾರ ನಡೆದ ದಿನ ಹನಿಪ್ರೀತ್ ಗುಹೆಯೊಳಗೆ ಹೋಗಿದ್ದು, ಅಳುತ್ತ ಹೊರಬಂದಿದ್ದು ಎಲ್ಲವನ್ನೂ ನೋಡಿದವರಿದ್ದಾರೆ. ಅಲ್ಲಿ ಗಾರ್ಡ್ ಆಗಿ ಕೆಲಸ ಮಾಡಿದ್ದ ಗುರ್ದಾಸ್ ಎಂಬಾತ ಈ ರಹಸ್ಯವನ್ನು ಬಯಲು ಮಾಡಿದ್ದಾನೆ.

ಈ ಘಟನೆಯ ನಂತರ ಹನಿಪ್ರೀತ್, ತನ್ನ ಮತ್ತು ರಾಮ್ ರಹೀಂಗೆ ಹುಟ್ಟೋ ಮಗನೇ ಡೇರಾ ಸಚ್ಛಾ ಸೌಧಕ್ಕೆ ಉತ್ತರಾಧಿಕಾರಿಯಾಗಬೇಕೆಂದು ಹಠ ಹಿಡಿದಿದ್ಲು. ಇಬ್ಬರೂ ಗಂಡ-ಹೆಂಡತಿಯಂತೆ ಬದುಕುತ್ತಿದ್ರು ಅನ್ನೋದನ್ನು ಹನಿಪ್ರೀತ್ ಳ ಮಾಜಿ ಪತಿಯೇ ಬಹಿರಂಗಪಡಿಸಿದ್ದಾನೆ. ರಾಮ್ ರಹೀಂನ ಮಗ ಜಸ್ಮೀತ್ ಸಿಂಗ್, ಡೇರಾ ಉತ್ತರಾಧಿಕಾರಿಯಾಗೋದು ಅವಳಿಗೆ ಇಷ್ಟವಿರಲಿಲ್ಲ.

2007ರಲ್ಲೇ ಜಸ್ಮೀತ್ ನನ್ನು ಉತ್ತರಾಧಿಕಾರಿಯಾಗಿ ಘೋಷಿಸಿದ್ದ ರಾಮ್ ರಹೀಂ, ನಂತರ ಹನಿಪ್ರೀತ್ ಳಿಂದಾಗಿ ಮನಸ್ಸು ಬದಲಾಯಿಸಿದ್ದ. ಹುಟ್ಟೋ ಮಗು ಹನಿಪ್ರೀತ್ ಳ ಮಾಜಿ ಪತಿ ವಿಶ್ವಾಸ್ ಗುಪ್ತಾನದ್ದು ಅಂತಾನೇ ಬಿಂಬಿಸಬೇಕೆಂದು ಪ್ಲಾನ್ ಮಾಡಿಕೊಳ್ಳಲಾಗಿತ್ತು. ಆದ್ರೆ ಆತ ಹನಿಪ್ರೀತ್ ಗೆ ವಿಚ್ಛೇದನ ನೀಡಿದ್ದರಿಂದ ಈ ಸಂಚು ಕಾರ್ಯರೂಪಕ್ಕೆ ಬಂದಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...