alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಪ್ರೀತ್ ಭೇಟಿಗೆ ಬಂದ ಕುಟುಂಬಸ್ಥರು ಹೇಳಿದ್ದೇನು?

ಗುರ್ಮಿತ್ ರಾಮ್ ರಹೀಮ್ ದತ್ತು ಪುತ್ರಿ ಹನಿಪ್ರೀತ್ ಅಂಬಾಲಾ ಸೆಂಟ್ರಲ್ ಜೈಲಿನಲ್ಲಿ ಬಂಧಿಯಾಗಿದ್ದಾಳೆ. ಆಕೆಯನ್ನು ನೋಡಲು ಎರಡನೇ ಬಾರಿ ಆಕೆ ಕುಟುಂಬಸ್ಥರು ಜೈಲಿಗೆ ಬಂದಿದ್ದರು. ಸಹೋದರ-ಸಹೋದರಿ, ಅತ್ತಿಗೆ ಹಾಗೂ ಬಾವ ಜೈಲಿನಲ್ಲಿ ಹನಿಪ್ರೀತ್ ಳನ್ನು ಭೇಟಿಯಾಗಿದ್ದಾರೆ.

ಭೇಟಿಗೆ ಬಂದ ಸಹೋದರ-ಸಹೋದರಿಯನ್ನು ನೋಡಿ ಬಿಕ್ಕಿಬಿಕ್ಕಿ ಅತ್ತಿದ್ದಾಳಂತೆ ಹನಿಪ್ರೀತ್. ಸಹೋದರಿ ಅಳ್ತಿರುವುದನ್ನು ನೋಡಿ ಆಕೆಗೆ ಸಮಾಧಾನ ಮಾಡಿದ್ದಾರೆ ಕುಟುಂಬಸ್ಥರು. ಒತ್ತಡ ಕಡಿಮೆ ಮಾಡಿಕೊಂಡು ಧೈರ್ಯದಿಂದ ಹೋರಾಡುವಂತೆ ಸಲಹೆ ನೀಡಿದ್ದಾರೆ. ಆದಷ್ಟು ಬೇಗ ಜೈಲಿನಿಂದ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ಇಂಟರ್ಕಾಮ್ ಮೂಲಕ ಕುಟುಂಬಸ್ಥರು ಹಾಗೂ ಹನಿಪ್ರೀತ್ ನಡುವೆ ಮಾತುಕತೆ ನಡೆದಿದೆ. ಸುಮಾರು 15 ನಿಮಿಷಗಳ ಕಾಲ ಮಾತನಾಡಿದ ಕುಟುಂಬಸ್ಥರು ಮತ್ತೆ ಬರುವ ವಿಶ್ವಾಸ ನೀಡಿದ್ದಾರೆ. ಕುಟುಂಬಸ್ಥರ ಭೇಟಿ ನಂತ್ರ ಹನಿಪ್ರೀತ್ ಸ್ವಲ್ಪ ರಿಲ್ಯಾಕ್ಸ್ ಆಗಿದ್ದಾಳಂತೆ.

ಈ ಮಧ್ಯೆ ಹನಿಪ್ರೀತ್ ಗೆ ವಿಐಪಿ ಟ್ರೀಟ್ಮೆಂಟ್ ಸಿಕ್ತಿದೆಯಂತೆ. ಸಮಯ ಮುಗಿದ್ರೂ ಹನಿಪ್ರೀತ್ ಸಂಬಂಧಿಕರಿಗೆ ಜೈಲಿನೊಳಗೆ ಹೋಗಲು ಅನುಮತಿ ನೀಡಲಾಗ್ತಿದೆ. ಜೊತೆಗೆ ಯಾವುದೇ ಭದ್ರತಾ ಪರೀಕ್ಷೆಯಿಲ್ಲದೆ ಅವರನ್ನು ಒಳಗೆ ಬಿಡಲಾಗ್ತಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...