alex Certify
ಕನ್ನಡ ದುನಿಯಾ       Mobile App
       

Kannada Duniya

ಹನಿಮೂನ್ ಅವ್ಯವಸ್ಥೆ ಮಾಡಿದ್ದಕ್ಕೆ ಬಿತ್ತು ದಂಡ…!

ಆನ್ ಲೈನ್ ಟ್ರಾವೆಲ್ ಕಂಪನಿಯಾದ ‘ಮೇಕ್ ಮೈ ಟ್ರಿಪ್’, ದಂಪತಿಯ ಹನಿಮೂನ್ ಹಾಳು ಮಾಡಿದ್ದಕ್ಕಾಗಿ 33,000 ರೂಪಾಯಿ ಪರಿಹಾರ ನೀಡಬೇಕಾಗಿ ಬಂದಿದೆ. ಇದರ ಜೊತೆಗೆ 8000 ರೂಪಾಯಿ ಮೊಕದ್ದಮೆ ವೆಚ್ಚವನ್ನೂ ನೀಡುವಂತೆ ಪಂಜಾಬ್ ನ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ವೇದಿಕೆ ಸೂಚಿಸಿದೆ.

ಪರಿಹಾರ ಮೊತ್ತ ನೀಡುವಲ್ಲಿ ವಿಫಲವಾದ್ರೆ ವರ್ಷಕ್ಕೆ ಶೇ.12ರಷ್ಟು ಬಡ್ಡಿ ವಿಧಿಸೋದಾಗಿ ವೇದಿಕೆ ಹೇಳಿದೆ. ಪಂಚಕುಲಾದ ತನುಜ್ ಅರೋರಾ ಎಂಬುವವರು ಮೇಕ್ ಮೈ ಟ್ರಿಪ್ ವಿರುದ್ಧ ದೂರು ದಾಖಲಿಸಿದ್ದರು. ಮೇಕ್ ಮೈ ಟ್ರಿಪ್ ಮೂಲಕ ಅವರು ಮಾರಿಷಸ್ ಗೆ ಪ್ರವಾಸ ಬುಕ್ಕಿಂಗ್ ಮಾಡಿದ್ದರು.

6 ರಾತ್ರಿ ಹಾಗೂ 7 ದಿನಗಳ ಟ್ರಿಪ್ ಅದು. ಮುಂಗಡವಾಗಿ 1,51,323 ರೂಪಾಯಿ ಪಾವತಿ ಮಾಡಿತ್ತು. ಲಾಡ್ಜಿಂಗ್ ವ್ಯವಸ್ಥೆಯನ್ನೆಲ್ಲ ಮಾಡಿರೋದಾಗಿ ಕನ್ಫರ್ಮ್ ಮಾಡಲಾಗಿತ್ತು. ಮದುವೆಗೂ 2 ದಿನ ಮುನ್ನ ತನುಜ್ ಗೆ ಇಮೇಲ್ ಕಳಿಸಿದ್ದ ಕಂಪನಿ, ತಾಂತ್ರಿಕ ಕಾರಣಗಳಿಂದ ನೀವು ಹೇಳಿದ ಹೋಟೆಲ್ ನಲ್ಲಿ ಬುಕ್ಕಿಂಗ್ ಸಾಧ್ಯವಾಗಿಲ್ಲ.

ಜಲ್ಸಾ ಬೀಜ್ ರೆಸಾರ್ಟ್ ನಲ್ಲಿ ಮಾಡಿದ್ದೇವೆ ಅಂತಾ ತಿಳಿಸಿತ್ತು. ನಂತರ ಹೋಟೆಲ್ ಲಾ ನಲ್ಲಿ ಬುಕ್ಕಿಂಗ್ ಮಾಡಿರೋದಾಗಿ ಇಮೇಲ್ ಕಳಿಸಲಾಗಿತ್ತು. ಆದ್ರೆ ಹೋಟೆಲ್ ಲಾ ನಲ್ಲಿ ಸರಿಯಾದ ವ್ಯವಸ್ಥೆಯೇ ಇರಲಿಲ್ಲ. ಈ ಬಗ್ಗೆ ತನುಜ್ ಇಮೇಲ್ ಮಾಡಿದ್ರೂ ಅದಕ್ಕೆ ಮೇಕ್ ಮೈ ಟ್ರಿಪ್ ನಿಂದ ಸೂಕ್ತ ಪ್ರತಿಕ್ರಿಯೆ ಬಂದಿರಲಿಲ್ಲ. ಹಾಗಾಗಿ ತನುಜ್ ದೂರು ನೀಡಿದ್ದರು.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...