alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳನ ಪ್ರಾಮಾಣಿಕತೆಗೆ ಮಾರುಹೋದ ಮಹಿಳಾ ಉದ್ಯಮಿ

ಪುಣೆ: ತಮಗೆ ಸಿಕ್ಕ ವಸ್ತುಗಳನ್ನು ವಾರಸುದಾರರಿಗೆ ಹಿಂತಿರುಗಿಸಿ, ಪ್ರಾಮಾಣಿಕತೆ ಮೆರೆದ ಎಷ್ಟೋ ವ್ಯಕ್ತಿಗಳ ಬಗ್ಗೆ ಓದಿರುತ್ತೀರಿ. ಪುಣೆಯಲ್ಲಿ ಕಳ್ಳನೊಬ್ಬನ ಪ್ರಾಮಾಣಿಕತೆ ಎಲ್ಲರ ಗಮನ ಸೆಳೆದಿದೆ.

ಮಹಿಳಾ ಉದ್ಯಮಿಯೊಬ್ಬರ ಪರ್ಸ್ ಎಗರಿಸಿದ್ದ ಕಳ್ಳನೊಬ್ಬ ಅದರಲ್ಲಿದ್ದ ಹಣ ತೆಗೆದುಕೊಂಡು ಡಿಎಲ್ ಅನ್ನು ಕೊರಿಯರ್ ಮಾಡಿದ್ದಾನೆ. ಉದ್ಯಮಿ ಸ್ವಪ್ನಾ ಡೇ ಅವರು ಮಾರ್ಚ್ 17 ರಂದು ಎಂ.ಜಿ. ರಸ್ತೆಯ ತಮ್ಮ ಅಂಗಡಿಯ ಬಾಗಿಲು ಹಾಕಿಕೊಂಡು ಎಸ್.ಯು.ವಿ. ಕಾರಿನಲ್ಲಿ ರೇಸ್ ಕೋರ್ಸ್ ಕಡೆಗೆ ಹೋಗಿದ್ದಾರೆ.

ಕಾರು ನಿಲ್ಲಿಸಿ, 10 ನಿಮಿಷ ವಾಕ್ ಮಾಡಿ ವಾಪಸ್ ಬರುವಷ್ಟರಲ್ಲಿ ಅವರ ಕಾರಿನಲ್ಲಿದ್ದ ಪರ್ಸ್ ಕಾಣೆಯಾಗಿದೆ. ಅವರ ಹತ್ತಿರದವರು ಗಿಫ್ಟ್ ಆಗಿ ಕೊಟ್ಟಿದ್ದ ಬೆಲೆ ಬಾಳುವ ಪರ್ಸ್ ಅದಾಗಿದ್ದು, ಡಿಎಲ್ ಸೇರಿದಂತೆ ಅಮೂಲ್ಯ, ಅಗತ್ಯವಾದ ವಸ್ತುಗಳು, ನಗದು ಅದರಲ್ಲಿದ್ದವು.

ಪರ್ಸ್ ಕಳೆದುಕೊಂಡ ಸ್ವಪ್ನಾ, ವನೌರಿ ಠಾಣೆಗೆ ದೂರು ನೀಡಿದ್ದು, ಡುಪ್ಲಿಕೇಟ್ ಡಿಎಲ್ ಪಡೆಯಲು ಪುತ್ರನೊಂದಿಗೆ ಮಾತನಾಡಿದ್ದಾರೆ. ಅದಾಗಿ 11 ದಿನಗಳ ಬಳಿಕ ಸ್ವಪ್ನಾ ಅವರಿಗೆ ಕೊರಿಯರ್ ಬಂದಿದೆ. ಪರ್ಸ್ ಕದ್ದಿದ್ದ ಕಳ್ಳ ಡಿಎಲ್ ಅನ್ನು ಅವರ ವಿಳಾಸಕ್ಕೆ ಕೊರಿಯರ್ ಮಾಡಿದ್ದಾನೆ.

ತಮ್ಮ ಡಿಎಲ್ ಮರಳಿ ಕೈ ಸೇರಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸ್ವಪ್ನಾ ಈ ಖುಷಿಯನ್ನು ಹಂಚಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...