alex Certify
ಕನ್ನಡ ದುನಿಯಾ       Mobile App
       

Kannada Duniya

ಸಲಿಂಗ ಕಾಮ ಅಪರಾಧವಲ್ಲ ಎಂದ ದತ್ತಾತ್ರೇಯ ಹೊಸಬಾಳೆ

RSS-leader-Dattatreya-Hosabale

ದೇಶದಲ್ಲಿ ಸಲಿಂಗ ಕಾಮದ ಕುರಿತಾಗಿ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲಿಯೇ ಲೈಂಗಿಕ ಆಯ್ಕೆಗಳು ಅವರವರ ವ್ಯಕ್ತಿಗತ ಆಸೆ ಆಕಾಂಕ್ಷೆಗಳಿಗೆ ಸಂಬಂಧಪಟ್ಟ ವಿಷಯವಾಗಿದ್ದು, ಹಾಗಾಗಿ ಇದು ಅಪರಾಧವೆನಿಸುವುದಿಲ್ಲ ಎಂದು ಆರ್‌ ಎಸ್‌ ಎಸ್‌ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಹೌದು. ನವದೆಹಲಿಯಲ್ಲಿ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ಲೈಂಗಿಕ ಆಯ್ಕೆಗಳು ಮತ್ತು ಲೈಂಗಿಕ ಸಂಬಂಧಗಳು ಜನರ ವೈಯಕ್ತಿಕ ವಿಚಾರಗಳಾಗಿದ್ದು, ಇದು ಯಾವುದೇ ಕಾರಣಕ್ಕೂ ಅಪರಾಧವೆನಿಸುವುದಿಲ್ಲ. ಅಲ್ಲದೆ ಈ ವಿಷಯದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಧ್ಯ ಪ್ರವೇಶಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಲೈಂಗಿಕ ಆಯ್ಕೆ ವಿಷಯ ವೈಯಕ್ತಿಕವಾಗಿದ್ದು ಸಮಾಜಕ್ಕೆ ಹಾನಿಕಾರವಾಗದ ಹೊರತು ಯಾವುದೇ ವ್ಯಕ್ತಿಗಳ ನಡುವಿನ ಸಲಿಂಗಕಾಮ ಅಪರಾಧವಾಗುವುದಿಲ್ಲ ಎಂದಿರುವ ದತ್ತಾತ್ರೇಯ ಹೊಸಬಾಳೆ, ಈ ಕುರಿತು ಆರ್‌ ಎಸ್‌ ಎಸ್‌ ನಿಲುವೇನು ಎಂದು ಕೇಳುವುದು ಸಮಂಜಸವಲ್ಲ ಎಂದು ಕಿಡಿ ಕಾರಿದ್ದಾರೆ.

ಪ್ರಸ್ತುತ ಐಪಿಸಿ ಕಲಂ 377ರ ಪ್ರಕಾರ ಸಲಿಂಗಕಾಮ ಅಪರಾಧವಾಗಿದ್ದು ಜಾಗತಿಕ ಮಟ್ಟದಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ಸಲಿಂಗಕಾಮ ಅಪರಾಧವಲ್ಲ ಎಂಬ ಕಾನೂನು ಜಾರಿಗೆ ಬರಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಈ ನಡುವೆ ಆರ್‌ ಎಸ್‌ ಎಸ್‌ ಪ್ರಧಾನ ಕಾರ್ಯದರ್ಶಿಯಾಗಿರುವ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಮಹತ್ವ ಪಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...