alex Certify
ಕನ್ನಡ ದುನಿಯಾ       Mobile App
       

Kannada Duniya

ಶಾರೂಕ್ ಕಾರು ಚಾಲನೆ ಮಾಡುತ್ತಿರುವಾಗಲೇ ನಡೆಯಿತು ಆ ಘಟನೆ

sharukh khan car 455ಖ್ಯಾತ ಬಾಲಿವುಡ್ ನಟ ಶಾರೂಕ್ ಖಾನ್ ಕಳೆದ ವಾರವಷ್ಟೇ ಗುರಂಗಾವ್ ಷೋ ರೂಮ್ ನಿಂದ ಖರೀದಿಸಿದ್ದ ಬಿಎಂಡಬ್ಲ್ಯೂ ಐ 8 ಕಾರಿನ ಕುರಿತ ವರದಿಯನ್ನು ಓದಿದ್ದೀರಿ. ಬಾಂದ್ರಾದ ತಮ್ಮ ನಿವಾಸ ‘ಮನ್ನತ್’ ನಿಂದ ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.

ತಮ್ಮ ಬಾಡಿಗಾರ್ಡ್ ಗಳನ್ನು ಹಿಂದೆ ಕೂರಿಸಿಕೊಂಡು ಶಾರೂಕ್ ಖಾನ್ ಕಾರು ಚಾಲನೆ ಮಾಡುತ್ತಿದ್ದ ವೇಳೆ ಬಾಂದ್ರಾದ ಜನನಿಬಿಡ ಪ್ರದೇಶದಲ್ಲಿ ಏಕಾಏಕಿ ಮಹಿಳೆಯೊಬ್ಬಳು ಕಾರಿಗೆದುರಾಗಿ ಬಂದಿದ್ದಾಳೆ. ಅಷ್ಟೇ ಅಲ್ಲ ಕಾರು ನಿಲ್ಲಿಸುವಂತೆ ಸೂಚಿಸಿದ ಅವಳು, ಅದರ ಬಾನೆಟ್ ಮೇಲೆರುವ ಪ್ರಯತ್ನ ನಡೆಸಿದ್ದಾಳೆ.

ಅಲ್ಲಿದ್ದ ಸಾರ್ವಜನಿಕರಿಗೆ ಮೊದಲಿಗೆ ಕಾರಿನೊಳಗಿರುವವರು ಯಾರೆಂಬುದರ ಅರಿವಾಗಿಲ್ಲ. ಬಳಿಕ ಶಾರೂಕ್ ಖಾನ್ ರನ್ನು ನೋಡುತ್ತಿದ್ದಂತೆಯೇ ಹತ್ತಿರ ಹೋಗಲು ಮುಂದಾಗಿದ್ದಾರೆ. ಅಷ್ಟರಲ್ಲೇ ಶಾರೂಕ್ ಖಾನ್ ಜೊತೆಗಿದ್ದ ಬಾಡಿಗಾರ್ಡ್ ಗಳು ಮಹಿಳೆಯನ್ನು ಪಕ್ಕಕ್ಕೆ ಸರಿಸಿ ಕಾರು ಮುಂದೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ. ಹೆಚ್ಚು ಜನ ಸೇರುವ ಮುನ್ನವೇ ಶರವೇಗದಲ್ಲಿ ಕಾರು ಚಲಾಯಿಸಿಕೊಂಡು ಶಾರೂಕ್ ಖಾನ್ ತೆರಳಿದ್ದಾರೆ.

ಶಾರೂಕ್ ಖಾನ್ ತಾವು ಖರೀದಿಸಿರುವ ನೂತನ ಸ್ಪೋರ್ಟ್ಸ್ ಕಾರನ್ನು ಇತ್ತೀಚೆಗಷ್ಟೇ ಲಂಡನ್ ನಲ್ಲಿ ಪದವಿ ವ್ಯಾಸಂಗ ಪೂರೈಸಿರುವ ಮಗ ಆರ್ಯನ್ ಗೆ ಗಿಫ್ಟ್ ನೀಡಲಿದ್ದರೆನ್ನಲಾಗಿದ್ದು, ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹಾಗೂ ನಟಿ ಶಿಲ್ಪಾ ಶೆಟ್ಟಿ ಕೂಡಾ ಬಿಎಂಡಬ್ಲ್ಯೂ ಐ 8 ಕಾರನ್ನು ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...