alex Certify
ಕನ್ನಡ ದುನಿಯಾ       Mobile App
       

Kannada Duniya

ಪಿ.ಎಫ್. ಖಾತೆದಾರರಿಗೆ ಶೀಘ್ರದಲ್ಲೇ ಸಿಗಲಿದೆ ಶುಭ ಸುದ್ದಿ

ಕೇಂದ್ರ ಸರ್ಕಾರ ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಗೆ ಸಂಬಂಧಿಸಿದಂತೆ ಶುಭ ಸುದ್ದಿಯೊಂದನ್ನ ನೀಡೋದಕ್ಕೆ ಸಿದ್ಧತೆ ನಡೆಸಿದೆಯಂತೆ. ಎಲ್ಲವೂ ಅಂದುಕೊಂಡ ಹಾಗೆ ಆದ್ರೆ ಸದ್ಯದಲ್ಲೇ ಕಾರ್ಮಿಕರ ಭವಿಷ್ಯ ನಿಧಿ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಶುಭ ಸುದ್ದಿಯೊಂದು ಸಿಗಲಿದೆ.

ಕಾರ್ಮಿಕ ಭವಿಷ್ಯ ಪರಿಹಾರ ನಿಧಿಯ ಅಡಿಯಲ್ಲಿ ಗುರುತಿಸಿಕೊಂಡಿರುವ ಉದ್ಯೋಗಿಗಳಿಗೆ ತಮ್ಮ ಪಿಎಫ್ ಹಣದ ಮೇಲೆ ಹೂಡಿಕೆ ಮಾಡುವ ಅವಕಾಶವನ್ನು ನೀಡಲು ಕೇಂದ್ರ ಕಾರ್ಮಿಕ ಇಲಾಖೆ ನೀಡಲು ಚಿಂತನೆ ನಡೆಸಿದೆಯಂತೆ. ಈ ಹೊಸ ನಿಯಮ ಜಾರಿಗೆ ಬಂದಿದ್ದೇ ಆದ್ರೆ ಉದ್ಯೋಗಿಗಳು ತಮ್ಮ ಹಣವನ್ನು ಕೇವಲ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಮಾತ್ರವಲ್ಲ. ಈಕ್ವಿಟಿ ಫಂಡ್ಸ್, ಷೇರು ಮಾರುಕಟ್ಟೆ, ಡಿಮ್ಯಾಟ್ ನಲ್ಲಿ ಹೂಡಿಕೆ ಮಾಡಿ ಹೆಚ್ಚಿನ ಲಾಭ ಪಡೆಯುವ ಅವಕಾಶವನ್ನು ನೀಡಲು ಮುಂದಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಈಗಾಗ್ಲೇ ಗುರುತಿಸಿಕೊಂಡಿರುವ ಕಾರ್ಮಿಕರಿಗೆ ಈ ಸವಲತ್ತು ನೀಡೋದಕ್ಕೆ ಕಾರ್ಮಿಕ ಇಲಾಖೆ ನಿರ್ಧರಿಸಿದೆ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಗುರುತಿಸಿಕೊಂಡಿರುವವರ ಮುಂದೆ ನಾಲ್ಕು ಆಯ್ಕೆಗಳಿರಲಿವೆಯಂತೆ. ಸರ್ಕಾರಿ ಭದ್ರತಾ ಠೇವಣಿ, ಈಕ್ವಿಟಿ, ನಿಗದಿತ ಆದಾಯ ಮೂಲ ಮತ್ತು ಸರ್ಕಾರದ ಭದ್ರತೆ ಇರುವ ಖಾಸಗಿ ಹಣ ಹೂಡಿಕೆಯ ಮಾರ್ಗಗಳಲ್ಲಿ ಖಾತೆದಾರರು ಯಾವುದನ್ನು ಬೇಕಾದ್ರು ಆರಿಸಿಕೊಳ್ಳಬಹುದಂತೆ. ಸರ್ಕಾರಕ್ಕೂ ಕೂಡ ಇದರಿಂದ ಲಾಭವಾಗುವ ಹಿನ್ನಲೆಯಲ್ಲಿ ಹೀಗೊಂದು ಕ್ರಮ ಜಾರಿಗೊಳಿಸೋಕೆ ಮಾತುಕತೆ ನಡೆಯುತ್ತಿದೆಯಂತೆ.

ಶೇಕಡಾ 75ರಷ್ಟು ಹಣ ಹೂಡಿಕೆ ಮಾಡಿ ಅದರಿಂದ ಲಾಭ ಗಳಿಸುವಂತ ಅವಕಾಶವನ್ನು ಎನ್ಪಿಎಸ್ ಗ್ರಾಹಕರು ಈ ಮೂಲಕ ಪಡೆಯಬಹುದಾಗಿದೆಯಂತೆ. ಇದರಲ್ಲಿ ಬರುವಂತಾ ಸಾಧಕ ಬಾಧಕಗಳ ಬಗ್ಗೆಯೂ ಚಿಂತನೆ ನಡೆಸಲಾಗ್ತಿದ್ದು, ಕಾನೂನು ಪ್ರಕ್ರಿಯೆ ಮುಗಿದ ಬಳಿಕ ಈ ನಿಯಮವನ್ನು ಕೇಂದ್ರ ಕಾರ್ಮಿಕ ಇಲಾಖೆ ಜಾರಿಗೆ ತರಬಹುದು ಅಂತ ಹೇಳಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...