alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಸ ನೋಟುಗಳ ಹೋಮ್ ಡೆಲಿವರಿ ಮೇಲೆ ‘ಐಟಿ’ ಕಣ್ಣು

new-note

ಪ್ರಧಾನಿ ನರೇಂದ್ರ ಮೋದಿಯವರು ನೋಟು ನಿಷೇಧ ಮಾಡಿದ ಬೆನ್ನಲ್ಲೇ ಮನೆಮನೆಗೂ ಹೊಸ ನೋಟುಗಳ ಸಪ್ಲೈ ಶುರುವಾಗಿತ್ತು. ಈ ಹೋಮ್ ಡೆಲಿವರಿ ರಹಸ್ಯವನ್ನು ಬೇಧಿಸಲು ಆದಾಯ ತೆರಿಗೆ ಇಲಾಖೆ ಮುಂದಾಗಿದೆ. ಈ ಹೊಸ ನೋಟುಗಳು ಸರ್ಕಾರಿ ಮುದ್ರಣಾಲಯದಿಂದ ಲಭ್ಯವಾಗುತ್ತಿದ್ವಾ? ಅಥವಾ ಆರ್ ಬಿ ಐನಿಂದ ಪೂರೈಕೆ ಮಾಡಲಾಗುತ್ತಿತ್ತಾ ಅನ್ನೋದನ್ನು ಪರಿಶೀಲಿಸುತ್ತಿದೆ.

ಕಳೆದ ತಿಂಗಳು ದಕ್ಷಿಣ ದೆಹಲಿಯಲ್ಲಿ 20 ಲಕ್ಷ ರೂಪಾಯಿಯ ಹೊಸ 2000 ರೂಪಾಯಿ ನೋಟುಗಳ ಬಂಡಲ್ ಇಟ್ಟುಕೊಂಡಿದ್ದ ವ್ಯಕ್ತಿಯೊಬ್ಬ ಸಿಕ್ಕಿಬಿದ್ದಿದ್ದ. ಆ ನೋಟುಗಳ ಬಂಡಲ್ ಮೇಲೆ ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳ ಸರ್ಕಾರಿ ಮುದ್ರಣಾಲಯಗಳ ಸೀಲ್ ಇತ್ತು. ಆತ ಕೊರಿಯರ್ ಬಾಯ್ ಕೃಷ್ಣ ಕುಮಾರ್, ಯಾರಿಗೋ ಹಣ ಡೆಲಿವರಿ ಮಾಡಲು ಕಾಯುತ್ತಿದ್ದಾಗ ಐಟಿ ಬಲೆಗೆ ಬಿದ್ದಿದ್ದಾನೆ.

ಸರ್ಕಾರಿ ಮುದ್ರಣಾಲಯಗಳಿಂದ ಕೆಲವರ ಕೈಗೆ ಹೊಸ ನೋಟುಗಳ ಕಂತೆ ಬಂದಿದ್ಹೇಗೆ ಎಂಬ ಬಗ್ಗೆ ಅಧಿಕಾರಿಗಳು ತನಿಖೆ ಮಾಡ್ತಿದ್ದಾರೆ. ನೋಟು ನಿಷೇಧದ ನಂತರ ನಾಸಿಕ್ ಹಾಗೂ ಸಲ್ಬೋನಿಯ ಸರ್ಕಾರಿ ಮುದ್ರಣಾಲಯಗಳಲ್ಲಿ ಪ್ರತಿ ದಿನ 52 ಮಿಲಿಯನ್ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಮುದ್ರಣಗೊಂಡ ನೋಟುಗಳನ್ನು ನೇರವಾಗಿ ಆರ್ ಬಿ ಐಗೆ ಕಳುಹಿಸಲಾಗುತ್ತದೆ, ಅಲ್ಲಿಂದ ನೋಟುಗಳು ಬ್ಯಾಂಕ್ ಗೆ ವಿತರಣೆಯಾಗುತ್ತವೆ.

ಹಾಗಾಗಿ ಹೊಸ ನೋಟುಗಳು ದಂಧೆಕೋರರ ಕೈಗೆ ಸಿಕ್ಕಿದ್ದು ಹೇಗೆ ಅನ್ನೋದೇ ಯಕ್ಷಪ್ರಶ್ನೆಯಾಗಿದೆ. ನೋಟು ನಿಷೇಧದ ಬಳಿಕ ಕೆಲವು ಬ್ಯಾಂಕ್ ಅಧಿಕಾರಿಗಳು ಕೂಡ ಅಕ್ರಮವಾಗಿ ಹಣ ಬದಲಾವಣೆ ದಂಧೆಯಲ್ಲಿ ತೊಡಗಿ ಕಮಿಷನ್ ಪಡೆಯುತ್ತಿದ್ದುದು ಬಯಲಾಗಿತ್ತು. ಈಗ ಮುದ್ರಣಾಲಯಗಳ ಸಿಬ್ಬಂದಿ ಮೇಲೆ ಆದಾಯ ತೆರಿಗೆ ಇಲಾಖೆಯ ಕಣ್ಣು ಬಿದ್ದಿದೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...