alex Certify
ಕನ್ನಡ ದುನಿಯಾ       Mobile App
       

Kannada Duniya

ಸೇನೆಯಿಂದ 5 ಉಗ್ರರು ಫಿನಿಶ್, ಕಣಿವೆ ರಾಜ್ಯದಲ್ಲಿ ಘರ್ಷಣೆ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಐವರು ಉಗ್ರರನ್ನು ಸದೆಬಡಿಯಲಾಗಿದೆ.

ಹಿಜ್ಬುಲ್ ಸಂಘಟನೆಯ ಕಮಾಂಡರ್ ಹಾಗೂ ಇತ್ತೀಚೆಗೆ ಸಂಘಟನೆಗೆ ಸೇರಿದ್ದ ಪ್ರಾಧ್ಯಾಪಕ ಮೊಹಮ್ಮದ್ ರಫಿ ಸೇನೆಯ ಕಾರ್ಯಾಚರಣೆಯಲ್ಲಿ ಮೃತಪಟ್ಟಿದ್ದಾನೆ. ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕನಾಗಿದ್ದು, ಸಂಘಟನೆ ಸೇರಿಕೊಂಡಿರುವುದು ಇತ್ತೀಚೆಗೆ ತಿಳಿದು ಬಂದಿತ್ತು.

ಶೋಪಿಯಾನ್ ಜಿಲ್ಲೆಯ ಬದಿಗಾಮ್ ನಲ್ಲಿ ಉಗ್ರರು ಅವಿತಿರುವ ಮಾಹಿತಿ ಪಡೆದ ಸೇನೆ ಅವರನ್ನು ಸುತ್ತುವರೆದು ಶರಣಾಗಲು ಸೂಚಿಸಿದೆ. ವ್ಯತಿರಿಕ್ತ ಪ್ರತಿಕ್ರಿಯೆ ಕಂಡು ಬಂದಿದ್ದು, ಆಗ ಕಾರ್ಯಾಚರಣೆ ನಡೆಸಿ ಉಗ್ರರನ್ನು ಸದೆಬಡಿಯಲಾಗಿದೆ.

ಮೊಹಮ್ಮದ್ ರಫಿ, ಸದ್ದಾಂ ಪೇದರ್, ತವಸೀಫ್ ಶೇಖ್, ಮೌಲ್ವಿ ಬಿಲಾಲ್, ಆದಿಲ್ ಅಹಮ್ಮದ್ ಸೇನಾ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಇದಾದ ಬಳಿಕ ಶೋಪಿಯಾನ್ ಜಿಲ್ಲೆಯಲ್ಲಿ ಘರ್ಷಣೆ ಉಂಟಾಗಿದ್ದು, 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...