alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ಕಳೆದ 10 ದಿನದಲ್ಲಿ ಮಾರಾಟವಾದ ಮದ್ಯದ ಮೊತ್ತವೆಷ್ಟು ಗೊತ್ತಾ?

ಶತಮಾನ ಕಂಡ ಅತ್ಯಂತ ಕೆಟ್ಟ ಪ್ರವಾಹ ಪರಿಸ್ಥಿತಿಯನ್ನು ಕೇರಳ ಈ ಬಾರಿ ಎದುರಿಸಿದೆ. ಈ ಅಂಶದ ನಡುವೆ ಇದೀಗ ಮತ್ತೊಂದು ಸುದ್ದಿ ಬೆಳಕಿಗೆ ಬಂದಿದೆ. ಕಳೆದ 10 ದಿನಗಳಲ್ಲಿ ಕೇರಳದಲ್ಲಿ 500 ಕೋಟಿ ರೂ.ಗೂ ಅಧಿಕ ಮೊತ್ತದ ಮದ್ಯ ಮಾರಾಟವಾಗಿದೆ.

ಕೇರಳ ರಾಜ್ಯ ಪಾನೀಯ ನಿಗಮ ಬಿಡುಗಡೆ ಮಾಡಿದ ವರದಿಯಲ್ಲಿ ಈ ಅಂಶ ಬಯಲಾಗಿದ್ದು, ಆ.15 ರಿಂದ 26ರ ವರೆಗೆ 516ಕೋಟಿ ರೂ. ಮೊತ್ತದ ಮದ್ಯ ಹಾಗೂ ಬೀರ್‌ ಮಾರಾಟವಾಗಿದೆ ಎಂದು ವರದಿ ನೀಡಿದೆ.

ಕೇರಳದಲ್ಲಿ ಉಂಟಾದ ಭೀಕರ ಪ್ರವಾಹದಲ್ಲಿ 231 ಮಂದಿ ಸಾವನ್ನಪ್ಪಿದ್ದರೆ, 14 ಲಕ್ಷ ಜನ ನಿರಾಶ್ರಿತರಾಗಿದ್ದಾರೆ. 3.26 ಲಕ್ಷ ಮಂದಿ ಇನ್ನೂ ನಿರಾಶ್ರಿತರ ಶಿಬಿರಗಳಲ್ಲಿ ವಾಸವಿದ್ದಾರೆ. ಕೇರಳ ಸರಕಾರ ಪ್ರವಾಹದಿಂದ ತೊಂದರೆಗೊಳಗಾದ ಪ್ರತಿ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ಶೀಘ್ರದಲ್ಲೇ 10 ಸಾವಿರ ರೂ.ಗಳನ್ನು ವಿತರಿಸಲು ತೀರ್ಮಾನಿಸಿದೆ.

ಕೇಂದ್ರ ಸರಕಾರ ಕೇರಳಕ್ಕೆ 600 ಕೋಟಿ ರೂ.ಗಳ ಪರಿಹಾರ ಘೋಷಣೆ ಮಾಡಿದ್ದು, ಪರಿಹಾರ ವಸ್ತುಗಳ ಮೇಲಿನ ವಾಣಿಜ್ಯ ತೆರಿಗೆ ಹಾಗೂ ಜಿಎಸ್‌ಟಿ ಮನ್ನಾ ಮಾಡಿದೆ. 26 ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಲಾಗಿದ್ದು, 50 ರಸ್ತೆಗಳನ್ನು ಸಾರ್ವಜನಿಕರ ಓಡಾಟಕ್ಕೆ ಮುಕ್ತಗೊಳಿಸಲಾಗಿದೆ. ಒಟ್ಟಾರೆ 3.64 ಲಕ್ಷ ಹಕ್ಕಿಗಳು ಹಾಗೂ 17 ಸಾವಿರ ಪಶುಗಳ ಮೃತದೇಹಗಳನ್ನು ಈಗಾಗಲೇ ಮಣ್ಣು ಮಾಡಲಾಗಿದೆ. 1924ರ ಬಳಿಕ ಉಂಟಾದ ಭೀಕರ ಪ್ರವಾಹ ಇದಾಗಿದ್ದು, ರಾಜ್ಯಕ್ಕೆ 19,500 ಕೋಟಿ ರೂ. ನಷ್ಟವುಂಟಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...