alex Certify
ಕನ್ನಡ ದುನಿಯಾ       Mobile App
       

Kannada Duniya

ಮೇಕೆ ‘ಮಾತೆ’ಯಂತೆ ಹಾಗಾಗಿ ಹಿಂದುಗಳು ಮಟನ್ ತಿನ್ನಬಾರದು ಎಂದ ಬಿಜೆಪಿ ನಾಯಕ

ಕೋಲ್ಕತ್ತಾ: ಗೋವುಗಳನ್ನು ಮಾತೆ ಎಂದು ಪೂಜಿಸುವುದು, ಕಾಮಧೇನು ಎಂದು ಆರಾಧಿಸುವುದು ಪುರಾತನ ಕಾಲದಿಂದಲೂ ಸಾಮಾನ್ಯ ಪದ್ಧತಿಯಾಗಿ ಬಂದಿದೆ. ಹಿಂದೂ ಸಂಪ್ರದಾಯದಲ್ಲಂತೂ ಇದೊಂದು ಆಚರಣೆಯಾಗಿಯೇ ನಡೆಸಲಾಗುತ್ತಿದೆ. ಹೀಗಿರುವಾಗ ಬಿಜೆಪಿ ನೇತಾರರೊಬ್ಬರು ಗೋವಿನ ಬದಲು ಮೇಕೆಯನ್ನು ಮಾತೆ ಎಂದು ಕರೆದು ಅಚ್ಚರಿಗೆ ಕಾರಣರಾಗಿದ್ದಾರೆ.

ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅವರು, ಗಾಂಧೀಜಿಯವರು ಮೇಕೆ ಹಾಲು ಕುಡಿಯುತ್ತಿದ್ದುದರಿಂದ ಮೇಕೆಯನ್ನು ’ಮಾತೆ’ ಎಂದು ಪರಿಗಣಿಸುತ್ತಿದ್ದರು. ಹಾಗಾಗಿ ಹಿಂದೂಗಳು ಮೇಕೆಯನ್ನು ’ಮಾತೆ’ ಎಂದು ಪರಿಗಣಿಸಿ ಮಟನ್ ಸೇವನೆ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಸಂಬಂಧಿಯಾಗಿರುವ ಚಂದ್ರ ಕುಮಾರ್ ಬೋಸ್, ಮೇಕೆ ಮಾತೆ ಎಂದು ಪರಿಗಣಿಸುವ ಬಗ್ಗೆ ವಿವರಗಳನ್ನು ನೀಡಿದ್ದಾರೆ. ಗಾಂಧೀಜಿ ಕೋಲ್ಕತ್ತಾದ ವುಡ್‍ಬರ್ನ್ ಪಾರ್ಕ್ ನಲ್ಲಿರುವ ಚಂದ್ರಕುಮಾರ್ ರ ತಾತ ಸರತ್ ಚಂದ್ರ ಬೋಸ್ ಅವರ ಮನೆಯಲ್ಲಿ ತಂಗಿದ್ದರಂತೆ. ಅಲ್ಲಿ ಅವರು ಮೇಕೆ ಹಾಲನ್ನೇ ಸೇವಿಸುತ್ತಿದ್ದರಂತೆ. ಹಾಲಿಗಾಗಿಯೇ ಎರಡು ಮೇಕೆಗಳನ್ನು ಅಲ್ಲಿ ಖರೀದಿಸಲಾಗಿತ್ತು. ಹಿಂದೂಗಳ ರಕ್ಷಕರಾಗಿದ್ದ ಗಾಂಧಿ ಮೇಕೆ ಹಾಲು ಸೇವಿಸುತ್ತಿದ್ದುದರಿಂದ ಮೇಕೆಯನ್ನು ಮಾತೆ ಎಂದು ಪರಿಗಣಿಸುತ್ತಿದ್ದರು. ಆದ್ದರಿಂದ ಹಿಂದೂಗಳು ಮೇಕೆ ಮಾಂಸ ಸೇವನೆ ನಿಲ್ಲಿಸಬೇಕು ಎಂಬುದು ಬೋಸ್ ಅವರ ವಾದ.

ಚಂದ್ರಕುಮಾರ್ ಬೋಸ್ ಅವರ ಈ ಹೇಳಿಕೆ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದು, ಮುಖ್ಯವಾಗಿ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ. ಬಿಜೆಪಿ ಹಿರಿಯ ನಾಯಕರೊಬ್ಬರು, ಗಾಂಧೀಜಿ ಮೇಕೆಯನ್ನು ಯಾವತ್ತೂ ಮಾತೆ ಎಂದು ಪರಿಗಣಿಸಿಲ್ಲ. ನಾವು ಗೋವುಗಳನ್ನು ಮಾತೆ ಎಂದು ಪರಿಗಣಿಸುತ್ತೇವೆಯೇ ಹೊರತು ಮೇಕೆಯನ್ನಲ್ಲ, ಇಂತಹ ಅಸಂಬದ್ಧ ಮಾತುಗಳನ್ನಾಡಬೇಡಿ ಎಂದು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...