alex Certify
ಕನ್ನಡ ದುನಿಯಾ       Mobile App
       

Kannada Duniya

ಬಕ್ರೀದ್ ಜೊತೆಗೆ ಸಾಮಾಜಿಕ ಕಾರ್ಯಕ್ಕೂ ಚಾಲನೆ

ಮುಸ್ಲಿಮರ ಪವಿತ್ರ ಆಚರಣೆ ಬಕ್ರೀದ್ ಹಿನ್ನಲೆಯಲ್ಲಿ ದೇಶಾದ್ಯಂತ ಕುರಿ, ಮೇಕೆಗಳ ಮಾರಾಟ ಭರ್ಜರಿಯಾಗಿ ನಡೀತಿದೆ. ಈ ಮಾರಾಟದ ಸಂದರ್ಭದಲ್ಲೇ ಮಹಾರಾಷ್ಟ್ರದ ಪುಣೆಯಲ್ಲಿ ಸಾಮಾಜಿಕ ಕಾರ್ಯವೊಂದಕ್ಕೆ ಮುಂದಾಗಲಾಗಿದೆ.

ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಮಾರಾಟವಾಗುವ ಪ್ರತಿ ಕುರಿ, ಮೇಕೆಗಳ ಬೆಲೆಯಲ್ಲಿ ನೂರು ರೂಪಾಯಿಯನ್ನ ಹಲವು ಸಾಮಾಜಿಕ ಕಾರ್ಯಗಳಿಗಾಗಿ ಸಂಗ್ರಹಿಸೋಕೆ ನಿರ್ಧರಿಸಿದೆ. ಈ ಬಗ್ಗೆ ಪಾಂಪ್ಲೆಟ್ಸ್ ಗಳನ್ನ ಹೊರಡಿಸಿ ಈಗಾಗ್ಲೇ ಪ್ರಾಣಿಗಳ ಮಾರಾಟ ನಡೆಯುವ ಸ್ಥಳಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಬಡವರ ಕಲ್ಯಾಣಕ್ಕೆ ಸರ್ಕಾರದಿಂದ ಜಾರಿಯಲ್ಲಿರುವ ಹಲವು ಜನಪರ ಯೋಜನೆಗಳ ಬಗ್ಗೆಯೂ ಈ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದೆ.

ಅನಾಥ ಮಕ್ಕಳ ವಿದ್ಯಾಭ್ಯಾಸ, ಮಹಿಳಾ ಸಬಲೀಕರಣ, ಬೀದಿ ಬದಿಯಲ್ಲಿ ಜೀವನ ನಡೆಸುತ್ತಿರುವ ವಯೋವೃದ್ಧರ ಪಾಲನೆಗಾಗಿ ಖರ್ಚು ಮಾಡೋದಕ್ಕೆ ಸಂಸ್ಥೆ ನಿರ್ಧರಿಸಿದೆ. ಮತ್ತೊಂದು ಪ್ರಮುಖ ವಿಚಾರ ಏನಂದ್ರೆ ಬಕ್ರೀದ್ ಹಬ್ಬಕ್ಕಾಗಿ ಕುರಿ, ಆಡು , ಮೇಕೆಗಳನ್ನ ಮಾರಾಟ ಮಾಡುವವರ ಪೈಕಿ ಶೇಕಡಾ 80 ರಷ್ಟು ಜನರು ಹಿಂದೂಗಳಾಗಿದ್ದಾರೆ. ಹಾಗಾಗಿ ಈ ಕಾರ್ಯಕ್ಕೆ ಇನ್ನಷ್ಟು ಯಶಸ್ಸು ಸಿಗಲಿದೆ ಅಂತ ಹೇಳಲಾಗ್ತಿದೆ. ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳ ಮೇಲೆ ನಡೆಯುವ ಸಾಮಾಜಿಕ ಕಾರ್ಯ ಇದಾಗಿರದೆ ಮಾನವೀಯತೆಯ ಒಗ್ಗಟ್ಟು ಪ್ರದರ್ಶಿಸುವ ಕಾರ್ಯ ಇದಾಗಿದೆ ಅಂತ ಇದನ್ನು ಆಯೋಜನೆ ಮಾಡಿರುವ ಸಾಮಾಜಿಕ ಸಂಸ್ಥೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...