alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವದ ಗೆಳೆಯರು ಅಂದ್ರೆ ಇವರೇ ಕಣ್ರೀ..!

Sometimes you need a hand to holdಸ್ನೇಹ, ಜಾತಿ-ಧರ್ಮದ ಎಲ್ಲೆ ಮೀರಿದ ಪವಿತ್ರ ಬಂಧನ ಅನ್ನೋದಕ್ಕೆ ಸಾಕ್ಷಿ ಜೈಪುರದ ವಿನೋದ್ ಮೆಹ್ರಾ ಮತ್ತು ಅನ್ವರ್ ಅಹ್ಮದ್.

ಇವರಿಬ್ಬರ ಕುಟುಂಬವೂ ಇವತ್ತು ನೆಮ್ಮದಿಯಾಗಿ, ಆನಂದವಾಗಿದೆ ಅಂದ್ರೆ ಅದಕ್ಕೆ ಕಾರಣ ಅವರ ಸ್ನೇಹ. ಅನ್ವರ್ ಹಾಗೂ ವಿನೋದ್ ಪರಸ್ಪರರ ಪತ್ನಿಯರಿಗೆ ಕಿಡ್ನಿ ದಾನ ಮಾಡಿದ್ದಾರೆ.

ವಿನೋದ್ ಅವರ ಪತ್ನಿ ಅನಿತಾ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ರು. ಆದ್ರೆ ಆಕೆಯ ರಕ್ತದ ಮಾದರಿ ಬಿ + ಆಗಿತ್ತು, ವಿನೋದ್ ರದ್ದು ಎ+. ಹಾಗಾಗಿ ವಿನೋದ್, ಪತ್ನಿಗೆ ಕಿಡ್ನಿ ಕೊಡಲು ಸಾಧ್ಯವಿರಲಿಲ್ಲ.

ಇನ್ನೊಂದ್ಕಡೆ ಅತಿಯಾಗಿ ನೋವು ನಿವಾರಕ ಮಾತ್ರೆ ಸೇವಿಸಿದ್ದರಿಂದ ಅನ್ವರ್ ಪತ್ನಿ ತಸ್ಲೀಮಾ ಕೂಡ ಕಿಡ್ನಿ ಕಳೆದುಕೊಂಡಿದ್ರು. ತಸ್ಲೀಮಾ ರಕ್ತದ ಮಾದರಿ ಎ+ ಆದ್ರೆ, ಅನ್ವರ್ ಬ್ಲಡ್ ಗ್ರೂಪ್ ಬಿ + ಆಗಿತ್ತು. ಹಾಗಾಗಿ ವಿನೋದ್ ತಮ್ಮ ಕಿಡ್ನಿಯನ್ನು ಸ್ನೇಹಿತನ ಪತ್ನಿ ತಸ್ಲೀಮಾರಿಗೆ ದಾನ ಮಾಡಿದ್ರೆ, ಅನ್ವರ್, ವಿನೋದ್ ಪತ್ನಿ ಅನಿತಾರಿಗೆ ಕಿಡ್ನಿ ಕೊಟ್ಟಿದ್ದಾರೆ.

ಸೆಪ್ಟೆಂಬರ್ 2 ರಂದು ನಾಲ್ವರಿಗೂ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕಿಡ್ನಿ ದಾನ ಮಾಡಿದ ವಿನೋದ್ ಹಾಗೂ ಅನ್ವರ್ ಈಗಾಗ್ಲೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಾತಿ- ಧರ್ಮದ ಕಟ್ಟಳೆಗಳನ್ನು ಮೀರಿದ ಇವರ ಸ್ನೇಹ ಎರಡು ಕುಟುಂಬವನ್ನು ಕಾಪಾಡಿದೆ. ‘ಹಿಂದು – ಮುಸ್ಲಿಂ ಭಾಯಿ ಭಾಯಿ’ ಅನ್ನೋ ಮಾತಿಗೆ ಇವರೇ ಬೆಸ್ಟ್ ಎಕ್ಸಾಂಪಲ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...