alex Certify
ಕನ್ನಡ ದುನಿಯಾ       Mobile App
       

Kannada Duniya

ಬಡ ಮುಸ್ಲಿಂ ಯುವತಿಯ ಮದುವೆಗೆ ಹಿಂದೂ ವ್ಯಕ್ತಿಯ ನೆರವು

sharia-islamic-marriage-uae

ತೆಲಂಗಾಣದಲ್ಲಿ ಬಡ ಮುಸಲ್ಮಾನ್ ಯುವತಿಯ ಮದುವೆಗೆ ಹಿಂದೂ ವ್ಯಕ್ತಿಯೊಬ್ಬ ಮುಕ್ತ ಮನಸ್ಸಿನಿಂದ ಸಹಾಯ ಮಾಡಿದ್ದಾನೆ. ರಾಜೇಶ್ ಮಸೂರಿ ಮತ್ತವರ ಸ್ನೇಹಿತರು ಮದುವೆ ಮನೆಯಲ್ಲಿ ಊಟ, ಡೆಕೋರೇಶನ್ ಸೇರಿದಂತೆ ಎಲ್ಲಾ ಕೆಲಸಗಳ ಜವಾಬ್ಧಾರಿ ವಹಿಸಿಕೊಂಡಿದ್ರು. ವಧು ಸುಲ್ತಾನಾ ಬೇಗಮ್ ಗೆ ಮದುವೆಯ ಧಿರಿಸನ್ನು ಮಾತ್ರ ಆಕೆಯ ಹೆತ್ತವರು ತಂದಿದ್ದಾರೆ. ಉಳಿದೆಲ್ಲ ಖರ್ಚು ವೆಚ್ಚ ಹಾಗೂ ಕೆಲಸವನ್ನು ರಾಜೇಶ್ ಮತ್ತವರ ಗೆಳೆಯರೇ ನೋಡಿಕೊಂಡ್ರು. ಹರಿದಾಸಪುರ ಕಮ್ಯೂನಿಟಿ ಹಾಲ್ ನಲ್ಲಿ ಡಿಸೆಂಬರ್ 22ರಂದು ಮದುವೆ ನಿರ್ವಿಘ್ನವಾಗಿ ನೆರವೇರಿದೆ. ಸುಲ್ತಾನಾಳ ತಂದೆ ಶುಲುಮೆಯಾ ಹೋಟೆಲ್ ಒಂದರಲ್ಲಿ ಕ್ಲೀನರ್, ಅವರಿಗೆ ಮೂವರು ಮಕ್ಕಳಿದ್ದಾರೆ. ಚಿಕ್ಕ ಬಾಡಿಗೆ ಮನೆಯಲ್ಲಿ ವಾಸ.

ಸುಲ್ತಾನಾ ಎಲ್ಲರಿಗಿಂತ ದೊಡ್ಡವಳು. ಹಣವಿಲ್ಲದೇ ಇದ್ದಿದ್ರಿಂದ ಮಗಳ ಮದುವೆ ಮಾಡಲಾಗದೆ ಶುಲುಮೆಯಾ ಚಿಂತಾಕ್ರಾಂತರಾಗಿದ್ರು. ಈ ವಿಷಯ ಗೊತ್ತಾಗ್ತಿದ್ದಂತೆ ರಾಜೇಶ್ ತಾವು ಸಹಾಯ ಮಾಡುವುದಾಗಿ ಮುಂದೆ ಬಂದ್ರು. ಕೆಲ ಮುಸ್ಲಿಮರು ಸಹ ಅವರೊಂದಿಗೆ ಕೈಜೋಡಿಸಿದ್ರು. ಕಮ್ಯೂನಿಟಿ ಹಾಲ್ ಬಾಡಿಗೆ 25,000  ರೂಪಾಯಿಯನ್ನು ಎಲ್ರೂ ಸೇರಿ ಕೊಟ್ಟಿದ್ದಾರೆ. 250 ಮಂದಿಗೆ ಶುದ್ಧ ಸಸ್ಯಾಹಾರಿ ಊಟ ತಯಾರಿಸಿಕೊಟ್ಟಿದ್ದಾರೆ. ಸರ್ಕಾರದ ಶಾದಿ ಮುಬಾರಕ್ ಸ್ಕೀಮ್ ಗಾಗಿ ಅರ್ಜಿ ಹಾಕಿದ್ರೂ ಆ ಹಣ ಬರೋದು ತಡವಾಗಿತ್ತು. ವರನ ಕಡೆಯವರು ಮದುವೆಗೆ ಅರ್ಜೆಂಟ್ ಮಾಡಿದ್ರಿಂದ ಸುಲ್ತಾನಾ ತಂದೆ ಕಂಗಾಲಾಗಿದ್ರು. ಕಷ್ಟದಲ್ಲಿ ಧರ್ಮವನ್ನು ಲೆಕ್ಕಿಸದೆ ಮಾನವೀಯತೆಯಿಂದ ನೆರವಾದ ರಾಜೇಶ್ ಗೆ ಅವರು ಧನ್ಯವಾದ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...