alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಗೆ ಅಸಭ್ಯ ಪ್ರಶ್ನೆಗಳನ್ನು ಕೇಳಿದ ಪಾಸ್ಪೋರ್ಟ್ ಅಧಿಕಾರಿ

ಲಕ್ನೋದ ತಾನ್ವಿ ಸೇಠ್ ಕುಟುಂಬದ ಜೊತೆ ವಿದೇಶಕ್ಕೆ ಹೋಗ ಬಯಸಿದ್ದರು. ಜೂನ್ 19 ರಂದು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಜೂನ್ 20 ರಂದು ಪಾಸ್ ಪೋರ್ಟ್ ಕಚೇರಿಗೆ ಹೋಗಿದ್ದಾರೆ. ದಾಖಲೆಯನ್ನು ಪರಿಶೀಲನೆ ಮಾಡ್ತಿದ್ದ ಅಧಿಕಾರಿಗಳು ತಾನ್ವಿ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ.

ತಾನ್ವಿ ಪತಿ ಹೆಸರು ಅನಸ್ ಸಿದ್ದಿಕಿ. 12 ವರ್ಷಗಳ ಹಿಂದೆ ತಾನ್ವಿ, ಅನಸ್ ಪ್ರೇಮ ವಿವಾಹವಾಗಿದ್ದಾರೆ. ಅನಸ್ ಪಾಸ್ಪೋರ್ಟ್ ನವೀಕರಿಸಬೇಕಿತ್ತಂತೆ. ಇಬ್ಬರೂ ಪಾಸ್ ಪೋರ್ಟ್ ಕಚೇರಿಗೆ ಹೋಗಿದ್ದಾರೆ. ಮೊದಲು ಅನಸ್ ಪಾಸ್ಪೋಟ್ ನೋಡಿದ ಅಲ್ಲಿನ ಅಧಿಕಾರಿ ರಮೇಶ್, ಹಿಂದು ಧರ್ಮಕ್ಕೆ ಪರಿವರ್ತನೆಯಾಗಿ ಹೆಸರು ಬದಲಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾನೆ. ಇದಕ್ಕೆ ಅನಸ್ ಒಪ್ಪಿಲ್ಲ.

ತಾನ್ವಿ ದಾಖಲೆ ಪರಿಶೀಲನೆ ನಡೆಸಿದ ರಮೇಶ್ ಕಚೇರಿಯಲ್ಲಿ ಕೂಗಾಡಿದ್ದಾನೆ. ಹಿಂದು ಮಹಿಳೆ ಪತಿ ಹೆಸರು ಮುಸ್ಲಿಂ ಆಗಿರಲು ಹೇಗೆ ಸಾಧ್ಯ. ಹೆಸರು ಬದಲಿಸಿಕೊಳ್ಳಬೇಕು. ಹಿಂದು ಹೆಸರನ್ನು ಇಟ್ಟುಕೊಳ್ಳಬೇಕೆಂದು ಕಿರುಚಾಡಿ ಅರ್ಜಿಯನ್ನು ಎಪಿಒ ಕಚೇರಿಕೆ ಕಳುಹಿಸಿದ್ದಾರೆ.

ಘಟನೆ ನಂತ್ರ ತಾನ್ವಿ ಹಾಗೂ ಅನಸ್ ಟ್ವೀಟರ್ ಮೂಲಕ ಸುಷ್ಮಾ ಸ್ವರಾಜ್ ಅವ್ರಿಗೆ ವಿಷ್ಯ ತಿಳಿಸಿದ್ದಾರೆ. ತಮಗೆ ಸಹಾಯ ಮಾಡುವಂತೆ ಕೋರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...