alex Certify
ಕನ್ನಡ ದುನಿಯಾ       Mobile App
       

Kannada Duniya

ಮುಸ್ಲಿಂ ಮನೆಯಿಂದ ಹೊರಟಿತು ಹಿಂದು ಹುಡುಗನ ಮದುವೆ ಮೆರವಣಿಗೆ

images

ಹಿಂದು, ಮುಸ್ಲಿಂ ಧರ್ಮದ ಆಚರಣೆಗಳು ಸಂಪೂರ್ಣ ಭಿನ್ನ. ಕೆಲವೊಮ್ಮೆ ಇದೇ ವಿಚಾರಕ್ಕೆ ಗಲಾಟೆಗಳು ಆಗುವುದುಂಟು. ಆದ್ರೆ ಎರಡೂ ಧರ್ಮವನ್ನು ಪ್ರೀತಿಯಿಂದ ಪಾಲಿಸುವ ಜನರೂ ನಮ್ಮೊಂದಿಗಿದ್ದಾರೆ. ಇದಕ್ಕೆ ಮುಂಬೈನಲ್ಲಿ ನಡೆದ ಮದುವೆ ಉತ್ತಮ ನಿದರ್ಶನ.

ದಕ್ಷಿಣ ದೆಹಲಿಯ ನೆಹರು ನಗರದ ಮುಸ್ಲಿಂ ಕುಟುಂಬವೊಂದು ತಮ್ಮ ಸಾಕು ಮಗನ ಮದುವೆಯನ್ನು ಹಿಂದು ಸಂಪ್ರದಾಯದಂತೆ ಮಾಡಿದೆ. ಲಕ್ಷ್ಮಣ್ ಎಂಬ ಹುಡುಗನಿಗೆ 5 ವರ್ಷವಿರುವಾಗಲೇ ಬೇಗ್ ಕುಟುಂಬ ದತ್ತು ಪಡೆದಿತ್ತು. ಹಿಂದು ಕುಟುಂಬದವನಾಗಿದ್ದ ಲಕ್ಷ್ಮಣ್ ಗೆ ತಂದೆ, ತಾಯಿ ಯಾರು ಇರಲಿಲ್ಲ. ಅನಾಥನಾಗಿದ್ದ ಹುಡುಗ ಬೇಗ್ ಕುಟುಂಬದಲ್ಲಿ ಹಿಂದುವಾಗಿಯೇ ಬೆಳೆದಿದ್ದಾನೆ. ಈಗ ಅವನ ಮದುವೆಯನ್ನು ಹಿಂದು ಸಂಪ್ರದಾಯದಂತೆ ಮಾಡಲಾಗಿದೆ.

ಲಕ್ಷ್ಮಣ್ ವಯಸ್ಸಿಗೆ ಬಂದ ನಂತರ ತನ್ನ ಜವಾಬ್ದಾರಿಯಂತೆ ಹಿಂದು ವಧುವನ್ನು ಹುಡುಕಿ ಮದುವೆ ಮಾಡಲಾಗಿದೆ. ವಧುವಿನ ಕುಟುಂಬದವರೂ ಬೇಗ್ ಕುಟುಂಬದ ನಿರ್ಧಾರದಿಂದ ಖುಷಿಯಾಗಿದ್ದಾರೆ. ಸಂಭ್ರಮದಿಂದ ಹಿಂದು ಪದ್ಧತಿಯಂತೆ ಮದುವೆ ನಡೆದಿದೆ. ಹಿಂದು ಸಂಪ್ರದಾಯದಂತೆ ಮದುವೆ ಮಾಡಿ ಬೇಗ್ ಕುಟುಂಬ ಏಕತೆಯನ್ನು ಮೆರೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...