alex Certify
ಕನ್ನಡ ದುನಿಯಾ       Mobile App
       

Kannada Duniya

ಮಿಲಿಟರಿ ಏರ್ಬೇಸ್ ಪ್ರವೇಶಿಸಲು ಯತ್ನಿಸಿದ ವ್ಯಕ್ತಿಗೆ ಗುಂಡೇಟು

ಗಾಜಿಯಾಬಾದ್ ನಲ್ಲಿರೋ ಹಿಂದನ್ ಏರ್ ಬೇಸ್ ನಲ್ಲಿ ಭದ್ರತಾ ಸಿಬ್ಬಂದಿ ವ್ಯಕ್ತಿಯೊಬ್ಬನ ಮೇಲೆ ಗುಂಡು ಹಾರಿಸಿದ್ದಾನೆ. ಭಾರೀ ಭದ್ರತೆ ಇರೋ ಈ ಮಿಲಿಟರಿ ವಿಮಾನಗಳ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ಗೋಡೆ ಹತ್ತಲು ಯತ್ನಿಸಿದ್ದ. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿದ್ದಾನೆ.

ಉತ್ತರ ಪ್ರದೇಶದ ಪ್ರತಾಪ್ ಗಢ ನಿವಾಸಿ, 25 ವರ್ಷದ ಸುಜೀತ್ ಎಂಬಾತ ಈ ಘಟನೆಯಲ್ಲಿ ಗಾಯಗೊಂಡಿದ್ದಾನೆ. ರಾತ್ರಿ 11 ಗಂಟೆ ವೇಳೆಗೆ ಸುಜೀತ್ ಅಕ್ರಮವಾಗಿ ಒಳಪ್ರವೇಶಿಸಲು ಯತ್ನಿಸಿದ್ದ. ಗೋಡೆ ಹತ್ತದಂತೆ ಭದ್ರತಾ ಸಿಬ್ಬಂದಿ ಸೂಚಿಸಿದ್ರೂ ಆತ ಸುಮ್ಮನಾಗಲಿಲ್ಲ.

ಕೊನೆಗೆ ಸಿಬ್ಬಂದಿ ಆತನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಏರ್ ಬೇಸ್ ನಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಗಳ ಬಗ್ಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿತ್ತು. ಹಾಗಾಗಿ ಭದ್ರತಾ ಸಿಬ್ಬಂದಿ ಇನ್ನಷ್ಟು ಅಲರ್ಟ್ ಆಗಿದ್ದರು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...