alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಲುವು ಕಮಲದ ಪಾಲಾದ್ರೂ ಸಿಎಂ ಅಭ್ಯರ್ಥಿ ಧುಮಾಲ್ ಗೆ ಸೋಲು

ಹಿಮಾಚಲ ಪ್ರದೇಶದಲ್ಲಿ ಕಮಲ ಗೆಲುವಿನ ಪತಾಕೆ ಹಾರಿಸಿದೆ. ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿದೆ. ಆದ್ರೆ ಬಿಜೆಪಿ ಸಿಎಂ ಅಭ್ಯರ್ಥಿ ಪ್ರೇಮ್ ಕುಮಾರ್ ಧುಮಾಲ್ ಸೋಲುಂಡಿದ್ದಾರೆ. ಇದ್ರಿಂದಾಗಿ ಬಿಜೆಪಿಗೆ ಹಿನ್ನೆಡೆಯುಂಟಾಗಿದೆ.

ಬಿಜೆಪಿ ಸಿಎಂ ಅಭ್ಯರ್ಥಿಯಾಗಿದ್ದ ಪ್ರೇಮ್ ಕುಮಾರ್ ಧುಮಾಲ್ ಸುಜನ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜೀಂದರ್ ರಾಣಾ ವಿರುದ್ಧ ಧುಮಾಲ್ ಸೋಲನುಭವಿಸಿದ್ದಾರೆ. ಹಿಮಾಚಲದ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಿಎಂ ಅಭ್ಯರ್ಥಿಯಾಗಿದ್ದ ಧುಮಾಲ್ ಸೋಲಿನ ನಂತ್ರ ಮುಂದಿನ ಮುಖ್ಯಮಂತ್ರಿ ಯಾರೆಂಬ ಚರ್ಚೆ ಶುರುವಾಗಿದೆ.

ಸಿಎಂ ರೇಸ್ ನಲ್ಲಿ ಜೈ ರಾಮ್ ಠಾಕೂರ್ ಹೆಸರು ಮೊದಲಿದೆ. ಜೈ ರಾಮ್ ಮಾಜಿ ಮಂತ್ರಿ ಹಾಗೂ ಬಿಜೆಪಿ ಮಾಜಿ ಅಧ್ಯಕ್ಷರಾಗಿದ್ದವರು. ಈಗಾಗಲೇ ಜೈ ರಾಮ್ ಠಾಕೂರ್ ಗೆ ದೆಹಲಿಯಿಂದ ಬುಲಾವ್ ಬಂದಿದೆ. ಈ ಮಧ್ಯೆ ಆರ್ ಎಸ್ ಎಸ್ ನ ಅಜಯ್ ಜಾಮ್ವಾಲ್ ಹೆಸರೂ ರೇಸ್ ನಲ್ಲಿ ಕೇಳಿ ಬಂದಿದೆ. ಅವರಿಗೆ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳ್ತಿವೆ.

ಧುಮಾಲ್ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜನರ ತೀರ್ಮಾನಕ್ಕೆ ಗೌರವ ನೀಡುತ್ತೇವೆ ಎಂದಿದ್ದಾರೆ. ಪಕ್ಷದ ಸಭೆಯಲ್ಲಿ ಮುಂದಿನ ಸಿಎಂ ಯಾರೆಂಬ ಬಗ್ಗೆ ಚರ್ಚೆ ನಡೆಸುವುದಾಗಿ ಅವರು ಹೇಳಿದ್ದಾರೆ. ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಧುಮಾಲ್, ಸೋಲು-ಗೆಲುವು ಸಾಮಾನ್ಯ. ವೈಯಕ್ತಿಕ ಸೋಲಿಗಿಂತ ಪಕ್ಷದ ಗೆಲುವು ಮುಖ್ಯ ಎಂದವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...