alex Certify
ಕನ್ನಡ ದುನಿಯಾ       Mobile App
       

Kannada Duniya

ಹಿಮಾಚಲ ಪ್ರದೇಶ ಚುನಾವಣೆ : ದಾಖಲೆ ಮತದಾನದ ನಿರೀಕ್ಷೆ

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಮತದಾನ ನಡೆಯುತ್ತಿದೆ. ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, ಮತದಾರರು ಬೆಳಿಗ್ಗೆಯಿಂದಲೇ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಈ ಬಾರಿ ಮತದಾನದ ವಿಷಯದಲ್ಲಿ ಹಿಮಾಚಲ ಪ್ರದೇಶ ದಾಖಲೆ ಬರೆಯುವ ಸಾಧ್ಯತೆಯಿದೆ.

ಹಿಮಾಚಲ ಪ್ರದೇಶ ಮತದಾನದ ವಿಚಾರದಲ್ಲಿ ಮುಂದಿದೆ. ಎಂಥ ಕಠಿಣ ಪರಿಸ್ಥಿತಿಯಲ್ಲೂ ಜನರು ತಮ್ಮ ಹಕ್ಕು ಚಲಾಯಿಸ್ತಾರೆ. ಹಿಮಾಚಲ ಪ್ರದೇಶದಲ್ಲಿ ಅತಿ ಹೆಚ್ಚೆಂದ್ರೆ 2003ರಲ್ಲಿ ಶೇಕಡಾ  74.51ರಷ್ಟು ಮತದಾನವಾಗಿತ್ತು. ಅತಿ ಕಡಿಮೆ ಎಂದ್ರೆ 1977ರಲ್ಲಿ ಶೇಕಡಾ 58.57ರಷ್ಟು ಮತದಾನವಾಗಿತ್ತು. 2012ರಲ್ಲಿ ಶೇಕಡಾ 73.51ರಷ್ಟು ಮಂದಿ ಮತದಾನ ಮಾಡಿದ್ದರು.

ಈ ಬಾರಿ ಚುನಾವಣಾ ಆಯೋಗ ಮತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದೆ. ಈ ಬಾರಿ ಮಂಗಳಮುಖಿಯರು ಕೂಡ ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಅವರು 20 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಮಾಡಲಿದ್ದಾರೆ. ಮಂಗಳಮುಖಿಯರಿಗೆ ಮತದಾನದ ಹಕ್ಕು ಸಿಗ್ತಿದ್ದಂತೆ ಒಟ್ಟು 29 ಮತದಾರರು ತಮ್ಮ ಹೆಸರು ನೋಂದಾಯಿಸಿದ್ದರು.

ಧರ್ಮಶಾಲಾ ವಿಧಾನಸಭಾ ಕ್ಷೇತ್ರದಲ್ಲಿ 8 ನೂರು ಟಿಬೆಟಿಯನ್ಸ್ ಮತದಾನ ಮಾಡಲಿದ್ದಾರೆ. ಹಿಮಾಚಲ ಪ್ರದೇಶ ಮತದಾನದ ಬಗ್ಗೆ ಎಲ್ಲರಲ್ಲೂ ಕುತೂಹಲವಿದೆ. 2003 ದಾಖಲೆಯನ್ನು ಈ ಬಾರಿ ಮತದಾರರು ಮುರಿಯುತ್ತಾರಾ ಎಂಬ ಪ್ರಶ್ನೆಗೆ ಸಂಜೆ ಉತ್ತರ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...