alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮೇಲಿನ ಪ್ರೀತಿಗಾಗಿ ಆತ ನೀಡಿದ ಅಚ್ಚರಿಯ ಗಿಫ್ಟ್

himachal pradesh manಹಿಮಾಚಲ ಪ್ರದೇಶದ ಪತಿಯೊಬ್ಬ ತನ್ನ ಪತ್ನಿ ಮೇಲಿನ ಪ್ರೀತಿಗಾಗಿ ಆಕೆಗೆ ಸ್ಪೆಷಲ್ ಗಿಫ್ಟ್ ನೀಡಿದ್ದಾನೆ. ಇದನ್ನು ಕಂಡು ಆಕೆ ಮಾತ್ರವಲ್ಲ ಆತನ ಸ್ನೇಹಿತ ಬಳಗಕ್ಕೂ ಅಚ್ಚರಿಯಾಗಿದೆಯಲ್ಲದೆ ಇಬ್ಬರ ಅನ್ಯೋನ್ಯತೆಗೆ ಅಭಿನಂದನೆ ವ್ಯಕ್ತವಾಗುತ್ತಿದೆ.

ಶಂಕರ್ ಮುಸಾಫಿರ್ ಎಂಬಾತನ ಪತ್ನಿ ಹಿಮಾಚಲ ಪ್ರದೇಶದ ಹಮೀರ್ ಪುರ್ ನ ಗೀತಾಂಜಲಿ ಖ್ಯಾತ ಬಾಲಿವುಡ್ ನಟ ಸಲ್ಮಾನ್ ಖಾನ್ ರ ದೊಡ್ಡ ಅಭಿಮಾನಿ. ಕಳೆದ ಬಾರಿ ‘ಭಜರಂಗಿ ಭಾಯಿಜಾನ್’ ಬಿಡುಗಡೆ ಸಂದರ್ಭದಲ್ಲಿ ಚಿತ್ರದ 5 ಟಿಕೇಟ್ ಗಳನ್ನು ತರುವಂತೆ ಗೀತಾಂಜಲಿ, ಪತಿ ಮುಂದೆ ಬೇಡಿಕೆ ಇಟ್ಟಿದ್ದು, ಶಂಕರ್ ಗೆ ಇದು ಸಾಧ್ಯವಾಗಿರಲಿಲ್ಲ. ಇದರಿಂದ ಗೀತಾಂಜಲಿಗೆ ನಿರಾಸೆಯಾಗಿದ್ದರೂ ಬಳಿಕ ಸುಮ್ಮನಾಗಿದ್ದರು.

ಆದರೆ ಅಂದು ಪತ್ನಿಗಾದ ನಿರಾಸೆಯನ್ನು ಹೋಗಲಾಡಿಸಲು ತೀರ್ಮಾನಿಸಿದ್ದ ಶಂಕರ್, ಈಗ ಬಿಡುಗಡೆಯಾಗಿರುವ ಸಲ್ಮಾನ್ ಖಾನ್ ರ ‘ಸುಲ್ತಾನ್’ ಚಿತ್ರದ ಮೊದಲ ಷೋನ ಎಲ್ಲ ಟಿಕೇಟ್ ಖರೀದಿಸಿದ್ದಾರೆ. ಗುರುಕುಲ್ ನ ಎವಿಆರ್ ಸಿನೇಮಾಸ್ ನ 120 ಟಿಕೇಟ್ ಗಳನ್ನು ಖರೀದಿಸಿದ್ದ ಶಂಕರ್, ಚಿತ್ರ ವೀಕ್ಷಿಸಲು ಪತ್ನಿಯನ್ನು ಕರೆದುಕೊಂಡು ಹೋದ ವೇಳೆ ಆಕೆಗೆ ಅಚ್ಚರಿಯಾಗಿದೆ. ಬಳಿಕ ಶಂಕರ್, ತಾವಿಬ್ಬರೇ ಚಿತ್ರ ವೀಕ್ಷಿಸಬೇಕೆಂಬ ಕಾರಣಕ್ಕೆ ಸರ್ಫ್ರೈಸ್ ನೀಡಿದ್ದಾಗಿ ಹೇಳಿದ್ದಾರೆ. ಪತಿಯ ಈ ಸ್ಪೆಷಲ್ ಗಿಫ್ಟ್ ಗೆ ಗೀತಾಂಜಲಿ ಪುಳಕಿತರಾಗಿದ್ದಾರೆ. ಪತಿ, ಪತ್ನಿ ಇಬ್ಬರೇ ಸಿನಿಮಾ ವೀಕ್ಷಿಸುತ್ತಿರುವ ಚಿತ್ರವನ್ನು ಶಂಕರ್, ತಮ್ಮ ಫೇಸ್ ಬುಕ್ ನಲ್ಲಿ ಹಾಕಿದ್ದು, ಇದಕ್ಕೆ ಆಪಾರ ಲೈಕ್ಸ್ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...