alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ಬಸ್ಸುಗಳ ಕುರಿತು ಪ್ರಮುಖ ನಿರ್ಧಾರ ಕೈಗೊಂಡ ಹಿಮಾಚಲ ಪ್ರದೇಶ ಸರ್ಕಾರ

ಶಾಲಾ ವಾಹನದಲ್ಲಿ ಓಡಾಡುವ‌ ವಿದ್ಯಾರ್ಥಿಗಳ‌ ಸುರಕ್ಷತಾ‌ ದೃಷ್ಟಿಯಿಂದ ಹಿಮಾಚಲ‌ ಪ್ರದೇಶ‌ ನೂತನ ನಿಯಮವೊಂದನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ನೂತನ ಕಾನೂನಿನಲ್ಲಿ‌ ಪ್ರಮುಖವಾಗಿ 15 ವರ್ಷ ಅವಧಿ ಓಡಿರುವ ಯಾವುದೇ ವಾಹನಗಳನ್ನು ಶಾಲಾ ವಾಹನಗಳನ್ನಾಗಿ ಬಳಸುವಂತಿಲ್ಲ ಹಾಗೂ 60 ವರ್ಷ‌‌ ಮೀರಿದ ಚಾಲಕರನ್ನು ಶಾಲಾ‌ ಬಸ್ ಗಳನ್ನು ಓಡಿಸಲು ಅನುಮತಿ‌ ನೀಡುವಂತಿಲ್ಲ ಎಂದು ಹೇಳಿದೆ.

ಶಾಲಾ ವಿದ್ಯಾರ್ಥಿಗಳ‌ ಹಿತದೃಷ್ಟಿಯಿಂದ ಸಿದ್ದಪಡಿಸಿರುವ ಈ ಕಾನೂನು ಕೇವಲ ಶಾಲಾ ಬಸ್ ಗಳಿಗೆ ಮಾತ್ರ ಸೀಮಿತವಾಗದೇ, ಶಾಲಾ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಕ್ಯಾಬ್, ಟ್ಯಾಕ್ಸಿಗಳಿಗೂ ಅನ್ವಯವಾಗಲಿದೆ ಎಂದು ಸರಕಾರದ ವಕ್ತಾರರು‌ ಹೇಳಿದ್ದಾರೆ.

ಏಪ್ರಿಲ್ ನಲ್ಲಿ ಕಾಂಗ್ರ ಜಿಲ್ಲೆಯ ನುರ್ಪುರ್ ಭಾಗದಲ್ಲಿ ನಡೆದ ಶಾಲಾ ಬಸ್ ಅಪಘಾತದಲ್ಲಿ 28 ವಿದ್ಯಾರ್ಥಿಗಳು ಮೃತ ಪಟ್ಟಿದ್ದರಿಂದ ಈ ನೂತನ ನಿಯಮವನ್ನು ಜಾರಿಗೊಳಿಸಲಾಗಿದ್ದು, ಈ ಸಂಬಂಧ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರೊಂದಿಗೆ ಶಾಲಾ‌ ಬಸ್ ಚಾಲನೆ ಮಾಡುವ ಚಾಲಕನಿಗೆ ಕಡ್ಡಾಯವಾಗಿ ಪ್ರತಿವರ್ಷ ನೇತ್ರ ಪರೀಕ್ಷೆ ಮಾಡಿಸಬೇಕು. ಐದು ವರ್ಷ ದೊಡ್ಡ ವಾಹನ ಚಾಲನೆ ಮಾಡಿದ ಅನುಭವ ಇರಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ನು ವಾಹನದಲ್ಲಿರುವ ಸೀಟಿಂಗ್ ಲಿಮಿಟ್ ಗಿಂತ ಒಂದುವರೆ ಪಟ್ಟು ವಿದ್ಯಾರ್ಥಿಗಳನ್ನು ಮಾತ್ರ ಕೂರಿಸಬೇಕು, ಸಿಸಿ ಕ್ಯಾಮರಾ ಕಡ್ಡಾಯಗೊಳಿಸಬೇಕೆಂದು ಸುತ್ತೋಲೆಯಲ್ಲಿ‌ ಸ್ಪಷ್ಟಪಡಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...