alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಣೆಯಾಗಿದ್ದ ಚಾರಣಿಗ ಕಂದಕದಲ್ಲಿ ಶವವಾಗಿ ಪತ್ತೆ

ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಾಪತ್ತೆಯಾಗಿದ್ದ ಚಾರಣಿಗನ ಶವ ಸಿಕ್ಕಿದೆ. 19 ವರ್ಷದ ಯುವಕ ಅಭಿನವ್ ಕುಮಾರ್ ಆದಿ ಹಿಮಾನಿ ಚಾಮುಂಡಾ ಬೆಟ್ಟ ಏರಿದ್ದ. ಆತ 12 ಕಿಮೀ ದೂರ ಕಾಲ್ನಡಿಗೆಯಲ್ಲಿ ಹೋಗಬೇಕಿತ್ತು.

13,000 ಅಡಿ ಎತ್ತರದಲ್ಲಿದ್ದ ದೇವಾಲಯಕ್ಕೆ ತೆರಳಲು ಮಾರ್ಚ್ 16ರಂದು ಅಭಿನವ್ ಮತ್ತವನ 7 ಸ್ನೇಹಿತರು ಚಾರಣ ಹೊರಟಿದ್ದರು. ಆದ್ರೆ ಮಾರ್ಗಮಧ್ಯೆಯೇ ಅಭಿನವ್ ನಾಪತ್ತೆಯಾಗಿದ್ದ. ಇದು ಯಾರ ಗಮನಕ್ಕೂ ಮೊದಲು ಬಂದಿರಲಿಲ್ಲ.

ಮೂವರು ಯುವಕರು ಮೊದಲು ತುತ್ತತುದಿ ತಲುಪಿದ್ದರು. ಅಭಿನವ್ ಇನ್ನೊಂದು ಗುಂಪಿನೊಂದಿಗೆ ಇದ್ದಾನೆ ಅಂತಾ ಭಾವಿಸಿದ್ದರು. ಆದ್ರೆ ಅವರ ಜೊತೆಗೂ ಅಭಿನವ್ ಬಂದಿರಲಿಲ್ಲ. ಆತ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ಭಾನುವಾರ ಮಾಹಿತಿ ಸಿಕ್ಕಿತ್ತು. ನಿನ್ನೆ 100 ಅಡಿ ಆಳದ ಕಂದಕವೊಂದರಲ್ಲಿ ಅಭಿನವ್ ಮೃತದೇಹ ಪತ್ತೆಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...