alex Certify
ಕನ್ನಡ ದುನಿಯಾ       Mobile App
       

Kannada Duniya

ಸಪ್ತಪದಿ ತುಳಿಯುತ್ತಿದ್ದ ವರನ ಪೈಜಾಮಾ ಜಾರಿದಾಗ….

punjabi-wedding 344ವಿವಾಹದಂತ ಮಹತ್ವದ ಸಂದರ್ಭಗಳಲ್ಲಿ ಆನೇಕ ತಮಾಷೆಯ ಘಟನೆಗಳು ನಡೆಯುತ್ತವೆ. ಕೆಲವೊಂದನ್ನು ವಧು- ವರರ ಬಂಧುಗಳು ಬೇಕೆಂದೇ ಹುಟ್ಟು ಹಾಕಿರುತ್ತಾರೆ. ಆದರೆ ಅನಿರೀಕ್ಷಿತ ಘಟನೆಗಳು ನಡೆದ ಸಂದರ್ಭದಲ್ಲಿ ತೀವ್ರ ಮುಜುಗರಕ್ಕೀಡಾಗಬೇಕಾಗುತ್ತದೆ. ಅಂತಹ ವರದಿಯೊಂದು ಇಲ್ಲಿದೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ವರನ ಫಜೀತಿ ಕಂಡು ವಿವಾಹಕ್ಕೆ ಆಗಮಿಸಿದ್ದ ಬಂಧು- ಬಾಂಧವರು ಮುಸಿ ಮುಸಿ ನಗುತ್ತಿದ್ದಾರೆ. ಪಂಜಾಬ್ ನ ಗುರುದ್ವಾರದಲ್ಲಿ ನಡೆದ ವಿವಾಹ ಸಂದರ್ಭದಲ್ಲಿ ವರ, ತನ್ನ ಪತ್ನಿಯೊಂದಿಗೆ ಸಪ್ತಪದಿ ತುಳಿಯುತ್ತಿರುವಾಗ ಆತ ಧರಿಸಿದ್ದ ಪೈಜಾಮ ಜಾರತೊಡಗಿದೆ.

ಈ ಮುಜುಗರದಿಂದ ಪಾರಾಗಲು ಆತ ಒಂದು ಕೈಯ್ಯಲ್ಲಿ ಪತ್ನಿಯ ಕೈ ಹಿಡಿದು ಮತ್ತೊಂದು ಕೈಯ್ಯಲ್ಲಿ ಪೈಜಾಮಾ ಹಿಡಿದಿದ್ದಾನೆ. ಈತನ ಫಜೀತಿ ನೋಡಲಾರದ ಬಂಧುವೊಬ್ಬರು ನೆರವಿಗೆ ಧಾವಿಸಿದ್ದು, ಆತನ ಪೈಜಾಮದ ಲಾಡಿಯನ್ನು ಬಿಗಿಯಾಗಿ ಕಟ್ಟಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...