alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಸಿಗರೇಟ್ ಪ್ರಿಯ ಮಾಡಿದ ಈ ಕೆಲಸ

zomato

ಕಸ್ಟಮರ್ ಕೇರ್ ಅಧಿಕಾರಿಗಳು ನಮ್ಮ ಪಾಲಿಗೆ ಅಪರಿಚಿತರು. ಏನಾದ್ರೂ ಸಮಸ್ಯೆ ಆದಾಗ ಮಾತ್ರ ನಾವು ಅವರಿಗೆ ಕರೆ ಮಾಡುತ್ತೇವೆ. ಕೆಲವೊಮ್ಮೆ ತಾಂತ್ರಿಕ ಸಹಾಯಕ್ಕಾಗಿ ನಡೆಸುವ ಸಂಭಾಷಣೆ ಸಖತ್ ಇಂಟ್ರೆಸ್ಟಿಂಗ್ ಆಗಿರುತ್ತದೆ. ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ಸ್ ಜೊತೆಗೆ ಗ್ರಾಹಕರು ವಿಚಿತ್ರವಾಗಿ ಮಾತನಾಡಿರುವ ಆಡಿಯೋ ಕ್ಲಿಪ್ ಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಲೇ ಇರುತ್ತವೆ.

ಜೊಮೇಟೋ ಕಂಪನಿಯ ಎಕ್ಸಿಕ್ಯೂಟಿವ್ ಹಾಗೂ ಗ್ರಾಹಕನ ನಡುವೆ ನಡೆದ ಮೆಸೇಜ್ ಚಾಟ್ ಈಗ ವೈರಲ್ ಆಗಿದೆ. ಗ್ರಾಹಕನೊಬ್ಬ ಜೊಮೇಟೋ ಮೂಲಕ ರೆಸ್ಟೋರೆಂಟ್ ನಿಂದ ಫುಡ್ ತರಿಸಲು ಆರ್ಡರ್ ಮಾಡಿರ್ತಾನೆ. ಹೇಗಾದ್ರೂ ಮಾಡಿ ಸಿಗರೇಟ್ ಕೂಡ ತರಿಸಿಕೊಳ್ಳಬೇಕು ಅನ್ನೋದು ಅವನ ಪ್ರಯತ್ನ. ಇದಕ್ಕಾಗಿ ಜೊಮೇಟೋ ಎಕ್ಸಿಕ್ಯೂಟಿವ್ ಒಬ್ಬಳಿಗೆ ಪರಿಪರಿಯಾಗಿ ಬೇಡಿಕೊಳ್ತಾನೆ. ಹೇಗಾದ್ರೂ ಮಾಡಿ 2 ಸಿಗರೇಟ್ ತರಿಸಿಕೊಡಿ ಅಂತಾ ಕೇಳ್ತಾನೆ.

ಆದ್ರೆ ರೆಸ್ಟೋರೆಂಟ್ ನವರು ಪ್ರತಿಕ್ರಿಯಿಸ್ತಾ ಇಲ್ಲ, ನಮ್ಮ ಸಿಬ್ಬಂದಿಯೂ ಅಲ್ಲಿಂದ ಹೊರಟಿರಬಹುದು ಅನ್ನೋದು ಅವಳ ರಿಪ್ಲೈ. ಕೊನೆಗೆ ಸಿಗರೇಟ್ ಆರೋಗ್ಯಕ್ಕೆ ಹಾನಿಕಾರಕ. ಅದರಿಂದ ಕ್ಯಾನ್ಸರ್ ಬರುತ್ತೆ, ಬೇರೆ ಏನಾದ್ರೂ ಸಹಾಯ ಬೇಕಾ ಅಂತಾ ಆಕೆ ಮೆಸೇಜ್ ಕಳಿಸಿದ್ದಾಳೆ. ಧನ್ಯವಾದ ಸಹೋದರ ನೀನು ನನ್ನ ಕಣ್ಣು ತೆರೆಸಿದೆ ಅನ್ನೋದು ಗ್ರಾಹಕನ ರಿಪ್ಲೈ, ಅಣ್ಣನಲ್ಲ ತಂಗಿ ಅಂತಾ ಆಕೆ ಪ್ರತಿಕ್ರಿಯೆ ನೀಡಿದ್ದಾಳೆ. ಹೀಗೆ ಸಿಗರೇಟ್ ನಿಂದಾಗುವ ಹಾನಿಯ ಬಗ್ಗೆ ವಿವರಿಸುವ ಮೆಸೇಜ್ ನೊಂದಿಗೆ ಅವರ ಸಂಭಾಷಣೆ ಅಂತ್ಯವಾಗಿದೆ. ಈ ಚಾಟ್ ಇಂಟರ್ನೆಟ್ ನಲ್ಲಿ ಹರಿದಾಡ್ತಾ ಇದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...