alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಪತಿಗಳ ವೇತನದಲ್ಲಿ ಭಾರೀ ಹೆಚ್ಚಳ

pranab-mukherjee_647_020716053622

ಕ್ಯಾಬಿನೆಟ್ ಸೆಕ್ರೆಟರಿಗೆ ರಾಷ್ಟ್ರಪತಿಗಳಿಗಿಂತ ಹೆಚ್ಚು ವೇತನವಿದೆ ಅನ್ನೋದನ್ನು ಅರ್ಥಮಾಡಿಕೊಂಡಿರುವ ಕೇಂದ್ರ ಸರ್ಕಾರ, ದೇಶದ ಪ್ರಥಮ ಪ್ರಜೆಗಳ ವೇತನದಲ್ಲಿ ಭಾರೀ ಹೆಚ್ಚಳ ಮಾಡ್ತಿದೆ. ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರ ಸಂಬಳ ಕೂಡ ಏರಿಕೆಯಾಗ್ತಿದೆ. ರಾಷ್ಟ್ರಪತಿಗಳ ವೇತನದಲ್ಲಿ ಶೇ.200ರಷ್ಟು ಹೆಚ್ಚಳವಾಗಿದ್ದು, 1.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗ್ತಿದೆ.

ಉಪರಾಷ್ಟ್ರಪತಿಗಳಿಗೆ ಇದುವರೆಗೆ 1.2 ಲಕ್ಷ ರೂ. ಸಂಬಳ ಬರುತ್ತಿತ್ತು, ಇನ್ಮೇಲೆ 3.5 ಲಕ್ಷ ರೂ. ಸಿಗಲಿದೆ. ನಿವೃತ್ತಿ ನಂತರ ರಾಷ್ಟ್ರಪತಿಗಳಿಗೆ 1.5 ಲಕ್ಷ ರೂ. ಸಿಗಲಿದೆ. ಚಳಿಗಾಲದ ಅಧಿವೇಶನದಲ್ಲಿ ಈ ಪ್ರಸ್ತಾವನೆಗೆ ಅಂಗೀಕಾರ ದೊರೆಯಲಿದೆ.

ಜನವರಿ 2016ರಿಂದ ಅನ್ವಯವಾಗುವಂತೆ ವೇತನ ಏರಿಕೆಯಾಗಲಿದೆ. 2008 ರಲ್ಲಿ ರಾಷ್ಟ್ರಪತಿಗಳ ವೇತನವನ್ನು 50,000 ರೂ. ಗಳಿಂದ 1.5 ಲಕ್ಷ ರೂ.ಗೆ ಏರಿಕೆ ಮಾಡಲಾಗಿತ್ತು. ಬಹಳ ದಿನಗಳಿಂದ ವೇತನ ಹೆಚ್ಚಳಕ್ಕಾಗಿ ಸಂಸದರು ಕೂಡ ಪಟ್ಟು ಹಿಡಿದಿದ್ದಾರೆ. ಈಗ ರಾಷ್ಟ್ರಪತಿಗಳ ವೇತನ ಏರಿಕೆಯಾಗ್ತಿದ್ದು, ಸಂಸದರ ಬೇಡಿಕೆಗೆ ಅನುಮೋದನೆ ನೀಡಬೇಕಾದ ಒತ್ತಡ ನರೇಂದ್ರ ಮೋದಿ ಅವರಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...