alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಖರೀದಿದಾರರಿಗೊಂದು ಶಾಕಿಂಗ್ ನ್ಯೂಸ್

GOLD_BANGLES456

ನವದೆಹಲಿ: ಮದುವೆ ಮೊದಲಾದ ಕಾರಣಗಳಿಂದ ಚಿನ್ನ ಖರೀದಿ ಮಾಡಲು ಮುಂದಾಗಿರುವ ಗ್ರಾಹಕರಿಗೊಂದು ಶಾಕಿಂಗ್ ನ್ಯೂಸ್ ಇಲ್ಲಿದೆ. ಕೆಲವು ದಿನಗಳಿಂದ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ದರ ಮತ್ತಷ್ಟು ದುಬಾರಿಯಾಗಿದ್ದು, ಖರೀದಿದಾರರ ಆಸೆಗೆ ತಣ್ಣೀರೆರಚಿದಂತಾಗಿದೆ.

ಹೌದು ಚಿನ್ನ ಖರೀದಿಸಲು ಗ್ರಾಹಕರು ಹಿಂದೆಮುಂದೆ ನೋಡುವಂತಾಗಿದೆ. ಎರಡು ದಿನಗಳ ಹಿಂದಷ್ಟೇ 28,000 ರೂ. ಗಡಿದಾಟಿದ್ದ ಚಿನ್ನ ಮತ್ತಷ್ಟು ದುಬಾರಿಯಾಗಿ 29,000 ರೂ. ಗಡಿ ದಾಟಿ ನಾಗಾಲೋಟದಲ್ಲಿ ಸಾಗಿದೆ. ಏರುಗತಿಯಲ್ಲಿಯಲ್ಲಿರುವ ಚಿನ್ನ ಒಂದೇ ದಿನದಲ್ಲಿ 850 ರೂ. ಹೆಚ್ಚಾಗಿದ್ದು, 10 ಗ್ರಾಂ ಗೆ 29,650 ರೂ. ತಲುಪಿದೆ. ಕಳೆದ 11 ದಿನದಲ್ಲಿ ಬರೋಬ್ಬರಿ 2600 ರೂ. ಹೆಚ್ಚಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಇರುವುದೇ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ.

ಅಲ್ಲದೇ, ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ, ರೂಪಾಯಿ ಮೌಲ್ಯ ಕುಸಿತ, ವ್ಯಾಪಾರಸ್ಥರು, ಚಿನ್ನಾಭರಣ ತಯಾರಕರು ಹೆಚ್ಚಾಗಿ ಚಿನ್ನ ಖರೀದಿಗೆ ಮುಂದಾಗಿದ್ದು ಕೂಡ ಬೆಲೆ ಏರಲು ಕಾರಣವಾಗಿದೆ. ಬೆಲೆ ಕಡಿಮೆಯಾದರೆ ಖರೀದಿಸಬಹುದೆಂದುಕೊಂಡಿದ್ದವರಿಗೆ ಚಿನ್ನದ ದರ ಏರುತ್ತಲೇ ಇರುವುದು ಶಾಕ್ ನೀಡಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...